ಮೂಡಲಗಿ ಕಸಾಪ ಕಾರ್ಯಕಾರಿಣಿ ಪದಾಧಿಕಾರಿಗಳ ಪದಗ್ರಹಣ ಇಂದು

Must Read

ಗಣ್ಯರ ಮೆರವಣಿಗೆ; ‘ಶುದ್ಧಿ’ ಪುಸ್ತಕ ಬಿಡುಗಡೆ

ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ ನೂತನ ಘಟಕದ ಕಾರ್ಯಕಾರಿ ಸಮಿತಿಯ ಪದಗ್ರಹಣ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಫೆ. 18ರಂದು ಮಧ್ಯಾಹ್ನ 3ಗಂಟೆಗೆ ಸ್ಥಳೀಯ ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಜರುಗಲಿದೆ.

ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿವಹಿಸುವರು. ಸಮಾರಂಭದ ಗೌರವಾಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾಗವಹಿಸುವರು. ಉದ್ಘಾಟಕರಾಗಿ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಅಧ್ಯಕ್ಷರಾಗಿ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಭಾಗವಹಿಸುವರು.

ಮುಖ್ಯ ಅತಿಥಿಗಳಾಗಿ ಸಾಹಿತಿ ಬಾಲಶೇಖರ ಬಂದಿ, ಬಿಇಒ ಅಜಿತ ಮನ್ನಿಕೇರಿ, ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್. ಸೊಸೈಟಿ ಅಧ್ಯಕ್ಷ ಬಸವಣ್ಣಿ ಮುಗಳಖೋಡ, ಹೊಸಟ್ಟಿಯ ಸಿದ್ದಪ್ಪ ನಾಯಿಕ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಭಾಗವಹಿಸುವರು.

ಪುಸ್ತಕ ಬಿಡುಗಡೆ: ಕರ್ನಲ್ ಪರಶುರಾಮ ನಾಯಿಕ ಅವರ ‘ಶುದ್ಧಿ’ ಪುಸ್ತಕದ ಬಿಡುಗಡೆ ಇರುವುದು.

ಮೆರವಣಿಗೆ: ಕಾರ್ಯಕ್ರಮದ ಪೂರ್ವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶ್ರೀಗಳನ್ನು, ಗಣ್ಯರನ್ನು, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಕಾರ್ಯಕಾರಿಣಿ ನೂತನ ಪದಾಧಿಕಾರಿಗಳು, ಸಾಹಿತಿಗಳನ್ನು ವಿವಿಧ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕುರುಹಿನಶೆಟ್ಟಿ ಸೊಸೈಟಿಯ ಸಭಾಭವನಕ್ಕೆ ಬರಮಾಡಿಕೊಳ್ಳಳಾಗುವುದು. ತಾಲ್ಲೂಕಿನ ಎಲ್ಲ ಕನ್ನಡ ಮನಸ್ಸಿನ ಮಹನೀಯರು ಭಾಗವಹಿಸಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group