ಸ್ಮಶಾನಗಳ ಅಭಿವೃದ್ಧಿ ಗೆ ಅನುದಾನ

Must Read

ಸಿಂದಗಿ: ಪಟ್ಟಣದಲ್ಲಿರುವ ಸ್ಮಶಾನ ಭೂಮಿಗಳು ಹಿಂದಿನಿಂದಲೂ ಒತ್ತುವರಿಯಾಗುತ್ತ ನಡೆದಿದ್ದು ಅವುಗಳನ್ನು ಸರ್ವೇ ಮಾಡಿಸಿ ಹದ್ದುಬಸ್ತಿ ಮಾಡುವ ಮೂಲಕ ಅವುಗಳ ಜೀರ್ಣೋದ್ದಾರ ಮಾಡಿದರೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ ಆ ನಿಟ್ಟಿನಲ್ಲಿ ಪಟ್ಟಣದ ಅಭಿವೃದ್ಧಿಯಲ್ಲಿನ ಸ್ವಲ್ಪ ಹಣ ಸ್ಮಶಾನ ಅಭಿವೃದ್ಧಿಗೆ ಬಳಕೆ ಮಾಡಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ಪುರಸಭೆಯ 15ನೇ ಹಣಕಾಸು ಯೋಜನೆಯಡಿ ಮರ್ತೂರ ಸ್ಮಶಾನ ಜೀರ್ಣೋದ್ಧಾರದ ರೂ 5 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದಲ್ಲಿನ ಸ್ಮಶಾನಗಳನ್ನು ಕೆಲ ಜನರು ಒತ್ತುವರಿ ಮಾಡಿಕೊಳ್ಳುತ್ತಿದ್ದು ಅದನ್ನು ನಿಲ್ಲಿಸಬೇಕಾದರೆ ಹದ್ದುಬಸ್ತ ಮಾಡಿಸಿ ಕಂಪೌಂಡ ನಿರ್ಮಿಸಿದರೆ ಒತ್ತುವರಿಯಾಗುತ್ತಿರುವುದಕ್ಕೆ ಕಡಿವಾಣ ಬಿಳುತ್ತದೆ ಆ ಕಾರಣಕ್ಕೆ ಪಟ್ಟಣದಲ್ಲಿನ ಎಲ್ಲ ಸ್ಮಶಾನಗಳ ಅಭಿವೃದ್ಧಿಗೆ ಮುಂದಾಗಲಾಗಿದೆ ಅಲ್ಲದೆ ಸ್ಮಶಾನ ಈ ಅನುದಾನದಲ್ಲಿ ಪೂರ್ಣಗೊಳ್ಳದಿದ್ದರೆ ಇನ್ನೂ ಅನುದಾನ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹಾಸೀಂ ಅಳಂದ, ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ಚಾಂದ ಕರ್ಜಗಿ, ಅಲ್ಲಿಸಾಬ ಮರ್ತೂರ. ಬಂದೇನವಾಜ ಕರ್ಜಗಿ, ರಹೀಮ್ ಮರ್ತೂರ. ದಾವಲಸಾಬ ಮರ್ತೂರ. ಬಾಬು ಮರ್ತೂರ. ಅಲ್ಲಾಬಕ್ಷ ಮರ್ತೂರ. ಗುಲಾಬ ಮರ್ತೂರ. ಮಶ್ಯಾಕ ಮರ್ತೂರ. ಸಲೀಮ್‍ಪಟೇಲ ಮರ್ತೂರ, ಪಾರೂಖ ಮರ್ತೂರ. ಅಲ್ತಾಫ್ ಮರ್ತೂರ. ಶಬ್ಬೀರ ಮರ್ತೂರ. ಹುಸೇನ್ ಮರ್ತೂರ. ಶಹನವಾಜ ಮಂದೇವಾಲ. ನಬಿ ಮರ್ತೂರ. ವಸೀಮ್ ಮರ್ತೂರ. ತೌಸೀಫ ನಾಟೀಕಾರ. ಮೈಹಿಬೂಬ ಮುಲ್ಲಾ. ಆಸ್ಪಾಕ ಕರ್ಜಗಿ. ರಫೀಕ್ ಆಳಂದ ಸೇರಿದಂತೆ ಅನೇಕರು ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group