ಓಂ ಶಾಂತಿ ಎಂದರೆ ಭಗವಂತ ವಾಸಿಸುವ ಶಕ್ತಿ ಕೇಂದ್ರ

Must Read

ಸಿಂದಗಿ: ಕ್ಯಾನ್ಸರ್ ರೋಗ ಭಯಾನಕ ರೋಗವಲ್ಲ. ಅದರ ಲಕ್ಷಣಗಳು ಕಂಡು ಬಂದರೆ ಕೂಡಲೇ ಚಿಕಿತ್ಸೆಗೆ ಒಳಪಡಬೇಕು ಮತ್ತು ಕಾಲ ಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಾ. ಸೌಮ್ಯ ಮನಗೂಳಿ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಡಿಯಲ್ಲಿ ನಡೆದ ಕ್ಯಾನ್ಸರ ಜಾಗ್ರತಿ ಅಭಿಯಾನದಡಿ ಉಚಿತ ತಪಾಸಣಾ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಭೂಮಿಯಲ್ಲಿ ಬೆಳೆಯುವ ಎಲ್ಲ ಬೆಳೆಗಳು ವಿಷಪೂರಿತವಾಗಿವೆ ಅದನ್ನು ನಾವೆಲ್ಲ ಸೇವನೆ ಮಾಡುತ್ತಿರುವುದರಿಂದ 100 ವರ್ಷ ಬದುಕುವ ಮನುಷ್ಯ 50 ವರ್ಷಕ್ಕೆ ಇಳಿಮುಖವಾಗಿದೆ ಕಾರಣ ಸಾವಯುವ ಹಾಗೂ ನೈಸರ್ಗಿಕವಾಗಿ ಬೆಳೆಯುವ ಬೆಳೆಗಳನ್ನು ಉಪಯೋಗಿಸುವುದರಿಂದ ಜೀವನವೃದ್ಧಿಯಾಗುವದಲ್ಲದೆ ಅನೇಕ ರೋಗಗಳಿಂದ ದೂರ ಉಳಿಯಲು ಸಾಧ್ಯ. ಎಂದು ಹೇಳಿದರು.

ಡಾ. ಚಂದ್ರಶೇಖರ ಹಿರೇಗೌಡರ ಮಾತನಾಡಿ, ಮನುಷ್ಯನು ಮೊದಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕಾದರೆ ಒಳ್ಳೆಯ ಆಹಾರ ಒಳ್ಳೆಯ ಪರಿಸರ ಬಹುಮುಖ್ಯ. ಮನುಷ್ಯ ಏನೆಲ್ಲಾ ಗಳಿಸಬಹುದು ಆದರೆ ಆರೋಗ್ಯ ಕಾಪಾಡಿಕೊಳ್ಳುವದು ಬಹುಮುಖ್ಯವಾಗಿದೆ ಎಂದರು.

ದಿವ್ಯಸಾನ್ನಿಧ್ಯ ವಹಿಸಿದ್ದ ಪ್ರಜಾಪಿತಾ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಪವಿತ್ರಾಜಿ ಅಕ್ಕನವರು ಮಾತನಾಡಿ, ಓಂಶಾಂತಿ ಎಂದರೆ ಕೇವಲ ಆಧ್ಯಾತ್ಮಿಕ ಕೇಂದ್ರವಲ್ಲ ಇದು ಒಂದು ಭಗವಂತ ವಾಸಿಸುವ ಶಕ್ತಿ ಕೇಂದ್ರವಾಗಿದೆ. ಇಲ್ಲಿ ನಾವೆಲ್ಲರೂ ಶಿವತಂದೆಯ ಸಂತಾನವಾಗಿದ್ದೇವೆ ಉಚಿತ ಆರೋಗ್ಯದ ತಪಾಸಣೆಯ ಶಿಬಿರದ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದುಕೊಂಡರು.

ವೈದ್ಯ ಸಿಬ್ಬಂದಿಗಳಾದ ಪ್ರಕಾಶ ನಾಯಿಕ. ನಾಗರಾಜ ಬಿರಾದಾರ. ಭೀಮು ಪಾಟೀಲ. ಅಭಿಗೌಡ ನಾಲವಾರ. ಮಡಿವಾಳಮ್ಮ ಗದ್ದಿಗಿಮಠ, ತಾನಾಜಿ ಕನಸೆ. ಸೋಮನಾಥ ಬುಳ್ಳಾ. ಕೆಎಸ್.ಪತ್ತಾರ. ಸಿ ಎಮ್‍ ಪುಜಾರಿ. ಎಸ್.ಎಸ್.ಪಾಟೀಲ. ಶಿವನಗೌಡ ಪಾಟೀಲ ಗಬಸಾವಳಗಿ. ಸಂಗಣ್ಣ ಬಿರಾದಾರ ಸೇರಿದಂತೆ ಅನೇಕ ಬ್ರಹ್ಮಕುಮಾರೀಯ ಕುಮಾರಿಯರು ಪಾಲ್ಗೊಂಡಿದ್ದರು.

ಬ್ರಹ್ಮಕುಮಾರ ಡಾ.ಬಾಳನಗೌಡ ಪಾಟೀಲ ನಿರೂಪಿಸಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group