ಶ್ರದ್ಧಾಕೇಂದ್ರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನ

Must Read

ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮೂಡಲಗಿ ಯೋಜನಾ ಕಛೇರಿ ವ್ಯಾಪ್ತಿಯ ಢವಳೇಶ್ವರ ಗ್ರಾಮದ ಶ್ರೀ ಉಳಿಮುಟ್ಟದ ರಂಗೇಶ್ವರ ದೇವರ ದೇವಸ್ಥಾನದ ಕಟ್ಟಡ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಪೂಜ್ಯ ಖಾವಂದರ ಆಶಯದಂತೆ ದೇವಸ್ಥಾನಗಳಿಗೆ ತಲಾ ರೂ.2 ಲಕ್ಷಗಳ ಅನುದಾನ ನೀಡಲಾಯಿತು.

ಯೋಜನೆಯ ಬೆಳಗಾವಿ-02 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಕೇಶವ ದೇವಾಂಗ ಹಾಗೂ ಮೂಡಲಗಿ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ದೇವರಾಜ್ ರವರು ದೇವಸ್ಥಾನಗಳ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಿಗೆ ಅನುದಾನದ ಡಿ.ಡಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗರವರು, ಶ್ರದ್ಧಾಕೇಂದ್ರಗಳು ಆಧ್ಯಾತ್ಮದೊಂದಿಗೆ ಮಾನವನು ಪರಿಪೂರ್ಣ ಜ್ಞಾನ ಪಡೆದುಕೊಳ್ಳಲು ಪ್ರಮುಖ ಮಾಧ್ಯಮಗಳಾಗಿವೆ. ಪ್ರತಿಯೊಬ್ಬ ವ್ಯಕ್ತಿಯು ಶ್ರದ್ಧಾಕೇಂದ್ರಗಳನ್ನು ನಿರ್ಮಿಸುವುದಷ್ಟೇ ಅಲ್ಲದೇ ಉತ್ತಮ ರೀತಿಯಲ್ಲಿ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.

ಯೋಜನಾಧಿಕಾರಿಗಳಾದ ದೇವರಾಜ್‍ರವರು, ಮೇಲ್ವಿಚಾರಕರಾದ ಶ್ರೀಮತಿ ವಿಜಯಾ ಹಾಗೂ ಶ್ರೀ ಉಳಿಮುಟ್ಟದ ರಂಗೇಶ್ವರ ದೇವರ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವೆಂಕಪ್ಪಾ ಪಾಂಡಪ್ಪಾ ಅಂಬಲಜೇರಿ, ಉಪಾಧ್ಯಕ್ಷರು ಮಹಾದೇವ ಹಣಮಂತ ಕೋಟಿ ಕಾರ್ಯದರ್ಶಿ ನಾಗಪ್ಪಾ ಲಕ್ಕಪ್ಪಾ ಸಂಕನ್ನವರ, ಕಜೌಂಚಿ ಕೃಷ್ಣಾಜ ಗೋವಿಂದರಾವ ಪಾಟೀಲ, ಸದಸ್ಯರು ಅಶೋಕ ರಾಮಪ್ಪ ಹಿರಡ್ಡಿ, ಭೀಮಪ್ಪ ಬಾಲಪ್ಪ ಕಾಂಬಳಿ, ತಮ್ಮಾಸಾಹೇಬ ಬಸನಾಯ್ಕ ನಾಯ್ಕ, ಢವಳೇಶ್ವರ ಗ್ರಾಮದ ಪ್ರಮುಖರು ಶ್ರೀಕಾಂತ ರಾಮಚಂದ್ರ ಚನ್ನಾಳ, ಮಹಾದೇವ ಭೀಮಪ್ಪ ನಾಡಗೌಡ ಹಾಗೂ ಊರಿನ ನಾಗರೀಕರು ಉಪಸ್ಥಿತರಿದ್ದರು.

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group