spot_img
spot_img

ಕಿಸಾನ್ ಡ್ರೋನ್ ; ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಮೊದಲ ಹೆಜ್ಜೆ-ಸಂಸದ ಈರಣ್ಣ ಕಡಾಡಿ

Must Read

spot_img
- Advertisement -

ಮೂಡಲಗಿ: ಕಿಸಾನ್ ಡ್ರೋನ್‍ಗಳು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಮೊದಲ ಹೆಜ್ಜೆಯಾಗಿದೆ. ಹೊಸ ಉದ್ಯೋಗ ಸೃಷ್ಟಿಸುವ ಜೊತೆಗೆ ವಿದ್ಯಾವಂತ ಯುವ ಕೃಷಿಕರಿಗೆ ಹೊಸ ಅವಕಾಶಗಳನ್ನು ನಿರ್ಮಿಸುತ್ತದೆ ಇದರಿಂದಾಗಿ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕೃಷಿ ಕ್ಷೇತ್ರಕ್ಕೆ ಇದು ವರದಾನವಾಗಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.

ರವಿವಾರ ಫೆ-20 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಫೆಬ್ರುವರಿ 1 ರಂದು ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಘೋಷಣೆಯಾಗಿದ್ದ, ಕಿಸಾನ್ ಡ್ರೋನ್ ಯೋಜನೆಯನ್ನು ಕೇವಲ 18 ದಿನಗಳಲ್ಲಿ ಜಾರಿಗೆ ಬರುವಂತೆ ಮಾಡಿದ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು.

ಕೃಷಿ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ತುಂಬಾ ಸಹಕಾರಿಯಾಗಲಿದೆ. ಕೀಟನಾಶಕ, ಔಷಧ, ಪೋಷಕಾಂಶಗಳ ಸಿಂಪಡಣೆ, ಬೆಳೆ ಆರೋಗ್ಯ ತಪಾಸಣೆ, ಭೂ ದಾಖಲೆಗಳ ಡಿಜಿಟಲೀಕರಣ, ಜಮೀನುಗಳ ಸರ್ವೆ ಈ ಎಲ್ಲ ಕಾರ್ಯಗಳಿಗೆ ಕಿಸಾನ್ ಡ್ರೋನ್ ಯೋಜನೆ ಅನುಕೂಲವಾಗಲಿದೆ. ರೈತ ಉತ್ಪಾದಕ ಸಂಸ್ಥೆಗಳಿಗೆ ಖರೀದಿಸಲು ಸರ್ಕಾರ ಶೇ. 75 ರಷ್ಟು ಸಬ್ಸಿಡಿ ನೀಡುತ್ತದೆ. ಹೆಕ್ಟೇರ್‍ಗೆ 6.000 ರೂ. ನಂತೆ ಪಾವತಿಸಿ ಬಾಡಿಗೆಗೂ ಪಡೆಯಬಹುದು. ಸದ್ಯ 100 ಸ್ಥಳಗಳಲ್ಲಿ ಕಿಸಾನ್ ಡ್ರೋನ್ ಯೋಜನೆ ಜಾರಿಗೆ ಚಾಲನೆ ನೀಡಲಾಗಿದ್ದು, 2 ವರ್ಷಗಳಲ್ಲಿ ಈ ಸಂಖ್ಯೆ 1 ಲಕ್ಷಕ್ಕೇರಲಿದೆ ಎಂದರು.

- Advertisement -
- Advertisement -

Latest News

ಕೃತಿ ಪರಿಚಯ : ಸಂತೃಪ್ತಿ ಸಾಧನೆಯ ‘ಹೇಮಸಿರಿ’

ವ್ಯಕ್ತಿ ತನ್ನ ಜೀವನದ ವೃತ್ತಾಂತವನ್ನು ತಾನೇ ಬರೆದರೆ ಅದನ್ನು ಆತ್ಮಕಥೆ, ಆತ್ಮವೃತ್ತ, ಆತ್ಮಚರಿತ್ರೆ ಎನ್ನುವರು. ವ್ಯಕ್ತಿ ತನ್ನನ್ನು ತಾನು ಚಿರಸ್ಮರಣೀಯ ಮಾಡಿಕೊಳ್ಳುವ ಪ್ರಯತ್ನವನ್ನು ಈ ಬಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group