ಪಶುಸಂಗೋಪನೆ ಸಚಿವರ ತವರೂರಿನಲ್ಲಿ ಗೋ ಮಾತೆಯ ಘನಘೋರ ಗತಿ

Must Read

ಬೀದರ – ಗೋ ಮಾತಾ ಮೇರಿ ಮಾ ಹೈ ಎಂದು ರಾಷ್ಟ್ರದಾದ್ಯಂತ ಹೇಳಿ ಕೊಂಡು ತಿರುಗುವ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ಜಿಲ್ಲೆ ಯಾದ ಬೀದರ ಜಿಲ್ಲೆಯಲ್ಲಿ ಗೋ ಮಾತೆಯ ಸ್ಥಿತಿ ಚಿಂತಾಜನಕವಾಗಿದೆ.

ಬೀದರ ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಗೋ ಶಾಲೆ ಗಳಿವೆ ಎನ್ನುವುದಕ್ಕೆ ಇಲ್ಲಿ ಕಾಣುವ ದೃಶ್ಯಗಳೇ ಸಾಕ್ಷಿ. ಬೆಳಗಾದರೆ ಬೀದರ ನಗರ ಒಳಗೊಂಡು ಜಿಲ್ಲೆಯ ಇತರ ಪಟ್ಟಣ ಗಳ ರಸ್ತೆಯಲ್ಲಿ ಗೋವುಗಳೆ ಕಾಣುವವು ಇವುಗಳಿಗೆ ರಸ್ತೆಯ ಅಕ್ಕ ಪಕ್ಕ ಬಿಳುವ ಪ್ಲಾಸ್ಟಿಕ್ ಬ್ಯಾಗ್ ಗಳೇ ಆಹಾರ ವಾಗಿದೆ.

ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ:

ಗಡಿ ಜಿಲ್ಲೆ ಬೀದರ್ ನಲ್ಲಿ ಗೋ ಮಾತೆಗೆ ತಿನ್ನಲು ಹುಲ್ಲು ಇಲ್ಲದೇ ರಸ್ತೆ ಮೇಲೆ ಬಿದ್ದಿದ್ದ ಪಾಲಿಥಿನ್ ಬ್ಯಾಗ್ ತಿನ್ನುವ ದೃಶ್ಯಗಳು ಕಂಡು ಬಂದಿವೆ.ಬೀದರ್ ಕ್ಷೇತ್ರದ ಪಶುಸಂಗೋಪನೆ ಪ್ರಭು ಚವ್ಹಾಣ ದೇಶದ ಪ್ರಧಾನಿ ನರೇಂದ್ರ ಮೋದಿ ಮುಂದೆ, ನಾನು ಗೋ ಹತ್ಯೆ ನಿಷೇಧ ಕಾನೂನು ತಂದಿದ್ದಾಗಿ ಹೇಳಿಕೊಂಡಿದ್ದರು.

ಕಸಾಯಿಖಾನೆಗೆ ಗೋ ಮಾತೆ ಸಾಗಾಣಿಕೆ ಮಾಡಿದವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವೆ ಎಂದು ಹೇಳಿದರು. ರಾಜ್ಯಾದ್ಯಂತ ಗೋ ಶಾಲೆ ತೆಗೆದು ಹುಲ್ಲು ಪೂರೈಕೆ ಮಾಡುವುದಾಗಿ ಹೇಳಿದ್ದರು. ಈಗ ಗೋವುಗಳು ತಿನ್ನಲು ಹುಲ್ಲು ಇಲ್ಲದೇ ಪ್ಲಾಸ್ಟಿಕ್ ತಿನ್ನುವ ಪರಿಸ್ಥಿತಿ ಬಂದಿದೆ.

ಇನ್ನೊಂದು ಕಡೆ ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಕೇಂದ್ರದಿಂದ ಬಿಡುಗಡೆ ಮಾಡಿದರೂ ನಗರ ಸಭೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ಬಿಟ್ಟಿದ್ದಾರೆ ಎಂದು ವಿಪರ್ಯಾಸದಿಂದ ಹೇಳಬಹುದು. ಎಲ್ಲೆಂದರಲ್ಲಿ ಕಸ ಬಿದ್ದು ನಗರದ ಸೌಂದರ್ಯ ಹಾಳಾಗಿದೆ. ಗೋವುಗಳು ಹಸಿವಿನಿಂದ ಕಂಗಾಲಾಗಿ ಪ್ಲಾಸ್ಟಿಕ್ ತಿನ್ನುವ ಸ್ಥಿತಿಗೆ ಬಂದಿವೆ.

ಕೂಡಲೇ ಪಶು ಸಂಗೋಪನಾ ಸಚಿವರು ಕಣ್ಣು ತೆರೆಯಬೇಕು. ಗೋ ರಕ್ಷಣೆಯ ಬಗ್ಗೆ ಬರೀ ಭಾಷಣಗಳಾಗಬಾರದು‌. ಜಿಲ್ಲೆಯಲ್ಲಿನ ಗೋಶಾಲೆಗಳಿಗೆ ತಕ್ಷಣವೇ ಮೇವು ಪೂರೈಕೆ, ಗೋವುಗಳ ಆರೈಕೆಯಂಥ ಕ್ರಮಗಳಿಗೆ ಸಚಿವರು ಮನಸ್ಸು ಮಾಡಬೇಕಿದೆ. ನಗರಸಭೆಯ ಅಧಿಕಾರಿಗಳು ಕೂಡ ನಗರದ ಸ್ವಚ್ಛತೆಯ ಕಡೆ ಗಮನ ಕೊಡಬೇಕಾಗಿದೆ ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group