ಹರ್ಷ ಕೊಲೆ ಖಂಡಿಸಿ ೨೩ರಂದು ಹುಮನಾಬಾದ ಬಂದ್

Must Read

ಬೀದರ – ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ 23ರಂದು ಹುಮನಾಬಾದ ಬಂದ್ ಬೃಹತ್ ಪ್ರತಿಭಟನೆ ನಡೆಸಲಾಗುವುದು ಇದಕ್ಕೆ ಎಲ್ಲರೂ ಬೆಂಬಲ ಕೊಡಬೇಕು ಎಂದು ಹಿಂದುಪರ ಸಂಘಟನೆ ಕಾರ್ಯಕರ್ತ ಲಕ್ಷ್ಮಿಕಾಂತ ಹಿಂದೊಡ್ಡಿ ಮನವಿ ಮಾಡಿಕೊಂಡಿದ್ದಾರೆ.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವತಿಯಿಂದ ಸೋಮವಾರ ರಾತ್ರಿ ನಡೆಸಲಾದ ಶ್ರದ್ದಾಂಜಲಿ ಸಭೆಯ ನಂತರ ಅವರು ಮಾತನಾಡಿದರು.

ಶಿವಮೊಗ್ಗದಲ್ಲಿ ಬಜರಂಗದಳ ಪ್ರಮುಖ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಕಳೆದ ವಾರ ಮುಸ್ಲಿಮ್ ಮತಾಂಧರು ಕೊಲೆ ಮಾಡಿದ್ದರು. ಇದರ ಪ್ರತಿಭಟನಾರ್ಥವಾಗಿ ಹುಮನಾಬಾದ ಹಿಂದೂಪರ ಸಂಘಟನೆ ರಾಜ್ಯದ ಪ್ರಮುಖರ ನಾಯಕರು ನೀಡಿರುವ ಆದೇಶದ ಮೇರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.

ಗುರುಸ್ವಾಮಿ, ವಿನೋದ ಜಾಜಿ, ಭದ್ರೇಶ ಜವಳಗಿ, ನವಿಲ್, ಮಧುರ ಭಂಡಾರಿ, ಮಹಾಂತೇಶ ಪೂಜಾರಿ, ಜ್ಯೋತಿಬಾ ಸಾಠೆ, ಮಹಾದೇವ ಗೌಳಿ, ಗೋಪಾಲಕೃಷ್ಣ ಮೊಹಳೆ, ಮನೋಜ ಓಂಕಾರೆ, ಶೈಲೇಂದ್ರ ಚವಾಣ ಮತ್ತಿತರರು ಇದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group