ಮರುಳಾರಾಧ್ಯ ಶಿವಾಚಾರ್ಯರ ದ್ವಿತೀಯ ಸ್ಮರಣೋತ್ಸವ

Must Read

ಸಿಂದಗಿ– ತಾಲೂಕಿನ ಕನ್ನೋಳ್ಳಿ ಗ್ರಾಮದ ಹಿರೇಮಠದ ಶತಾಯುಷಿ ಲಿಂ. ಶ್ರೀ ಮರುಳಾರಾಧ್ಯ ಶಿವಾಚಾರ್ಯರರ ದ್ವಿತೀಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಫೆ.25 ರಂದು ಮುಂಜಾನೆ 10 ಗಂಟೆಗೆ ಶ್ರೀ ಮಠದಲ್ಲಿ ಜರುಗಲಿದೆ.

ಅಂದು ಮುಂಜಾನೆ ನಸುಕಿನ ಜಾವ ಶ್ರೀಗಳ ಕತೃ ಗದ್ದಿಗೆಗೆ ರುದ್ರಾಭಿಷೇಕ ಹಾಗೂ ಶ್ರೀಗಳ ಭಾವಚಿತ್ರದ ಅಡ್ಡ ಪಲ್ಲಕ್ಕಿ ಉತ್ಸವ ಜರುಗಲಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಬಂಥನಾಳದ ಶ್ರೀ ವೃಷಭಲಿಂಗ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಸಿಂದಗಿ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ನೇತೃತ್ವವನ್ನು ಕೆರುಟಗಿಯ ಶ್ರೀ ಶಿವಬಸವ ಶಿವಾಚಾರ್ಯರರು ಹಾಗೂ ಸಮ್ಮುಖವನ್ನು ಯಂಕಂಚಿಯ ಶ್ರೀ ಅಭಿನವರುದ್ರಮನಿ ಶಿವಾಚಾರ್ಯರರು, ಕೊಣ್ಣೂರಿನ ಡಾ. ವಿಶ್ವಪ್ರಭುದೇವ ಶಿವಾಚಾರ್ಯರರು, ಆಲಮಟ್ಟಿಯ ಡಾ.ರುದ್ರಮನಿ ದೇವರು ಭಾಗವಹಿಸಲಿದ್ದಾರೆ. ನಂತರ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ಅನುಗ್ರಹ ವ್ಹಿಜನ್ ಫೌಂಡೇಶನ್, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ವಿಜಯಪುರ ಇವುಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸನೆ ಶಿಬಿರ ಹಾಗೂ ಉಚಿತ ಶಸ್ತ್ರಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ. ನಂತರ ಪ್ರಸಾದ ಸೇವೆ ಹಾಗೂ ಡೊಳ್ಳಿನ ಹಾಡಿಕೆಗಳು ನಡೆಯಲಿವೆ ಎಂದು ಶ್ರೀಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group