ಎನ್. ಪಿ. ಎಸ್ ತೊಲಗಿಸಿ ಓ. ಪಿ. ಎಸ್ ಜಾರಿ ಮಾಡಲು ಶಿಕ್ಷಕರ ಮನವಿ

Must Read

ಸವದತ್ತಿ: ಎನ್. ಪಿ. ಎಸ್ ತೊಲಗಿಸಿ ಓ. ಪಿ. ಎಸ್ ಜಾರಿ ಮಾಡಲು, ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಸವದತ್ತಿಯ ಅಧ್ಯಕ್ಷರಾದ ಹೆಚ್ ಆರ್ ಪೆಟ್ಲೂರ ಇವರ ನೇತೃತ್ವದಲ್ಲಿ ವಿಧಾನಸಭಾ ಉಪಾಧ್ಯಕ್ಷ ಹಾಗೂ ಶಾಸಕ ಆನಂದ ಚಂದ್ರಶೇಖರ ಮಾಮನಿ ಇವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಫ್ ಜಿ ನವಲಗುಂದ, ಉಪಾಧ್ಯಕ್ಷರಾದ ಶ್ರೀಮತಿ ಅನಸೂಯಾ ಮದನಬಾವಿ, ಆಯ್ ಪಿ ಕಿತ್ತೂರ ಖಜಾಂಚಿ, ಕಿರಣ ಕುರಿ ಸಂಘಟನಾ ಕಾರ್ಯದರ್ಶಿಗಳು, ಶ್ರೀಮತಿ ಪ್ರೇಮಾ ಹಲಕಿ ಸಹ ಕಾರ್ಯದರ್ಶಿಗಳು ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ.ಬಿ ಕೆ ಪಡೆಪ್ಪನವರ , ಡಿ ಎ ಮೇಟಿ, ಮತ್ತು ಉಗರಗೋಳ‌ ಸಿ ಆರ್ ಪಿ ಯವರಾದ ಕುಶಾಲ ಮುದ್ದಾಪೂರ , ಶಾಸಕರ ಮಾದರಿ ಶಾಲೆಯ‌ ಮುಖ್ಯೋಪಾಧ್ಯಾಯರಾದ ಮಂಜುನಾಥ ಕಮ್ಮಾರ ,ಹಿರಿಯ ಶಿಕ್ಷಕರಾದ ಸುರೇಶ ಕರಿಗಾರ , ಸ ಹಿ.ಪ್ರಾ ಶಾಲೆ ನಂ-10 ನಡುವಿನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ವ್ಹಿ ಜೋಶಿ, ಎಮ್ ಜಿ ದೊಡಮನಿ, ಪಿ ಎಸ್ ಶಿಂಧೆ, ಜೆ ಎಸ್ ಗೊರೋಬಾಳ, ರಾಮಣ್ಣ ಗುಡಗಾರ ಹಾಗೂ ಇನ್ನಿತರರು ಹಾಜರಿದ್ದರು

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group