ಹಿಟ್ಟಣಗಿ ಗ್ರಾಮದಲ್ಲಿ ಆಧ್ಯಾತ್ಮಿಕ ಪ್ರವಚನ

Must Read

ಮುನವಳ್ಳಿಃ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಜಾತ್ರೆ ಹಾಗೂ ಲಿಂಗೈಕ್ಯ ಮ.ಘ.ಚ.ಸಂಗಮೇಶ್ವರ ಶಿವಾಚಾರ್ಯರ ೮೭ ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಐದು ದಿನಗಳ ಅಧ್ಯಾತ್ಮಿಕ ಪ್ರವಚನ ಇತ್ತೀಚೆಗೆ ಪ್ರಾರಂಭವಾಯಿತು.

ಈ ಕಾರ್ಯಕ್ರಮಕ್ಕೆ ಮುನವಳ್ಳಿ ಸೋಮಶೇಖರಮಠದ ಶ್ರೀ.ಮ.ನಿ.ಪ್ರ.ಸ್ವ. ಮುರುಘೇಂದ್ರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಚಾಲನೆ ನೀಡಿ “ಶ್ರೀ ಸಂಗಮೇಶ್ವರ ಅಜ್ಜನವರು ಪವಾಡ ಪುರುಷರಾಗಿದ್ದರು.ಭಕ್ತಿ ಭಾವೈಕ್ಯದ ಪ್ರತೀಕರಾಗಿದ್ದರು.ಅಂಥ ಮಹಾನ್ ಪೂಜ್ಯರ ಪುಣ್ಯಸ್ಮರಣೆಯನ್ನು ಹಿಟ್ಟಣಗಿ ಗ್ರಾಮಸ್ಥರು ಹಮ್ಮಿಕೊಂಡು ಪ್ರವಚನ, ದಾಸೋಹ ಸೇವೆ, ಪಲ್ಲಕ್ಕಿ ಉತ್ಸವಗಳನ್ನು ಜರುಗಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂಥ ಪ್ರವಚನಗಳನ್ನು ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು”ಎಂದು ತಿಳಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಏಣಗಿಯ ಬಂಗಾರಜ್ಜನ ಮಠದ ಪರಮ ಪೂಜ್ಯ ವಿರುಪಾಕ್ಷ ಮಹಾಸ್ವಾಮಿಗಳು ವಹಿಸಿದ್ದರು. ಪ್ರವಚನಕಾರರಾಗಿ ಬೈಲಹೊಂಗಲದ ವೇದಮೂರ್ತಿ ಶಿದ್ರಾಮಶಾಸ್ತ್ರಿಗಳು ಪ್ರವಚನ ನೀಡಿದರು. ಗ್ರಾಮದ ಹಿರಿಯರಾದ ಬಸಪ್ಪ ರಾಮನಗೌಡ, ಸಂಗಪ್ಪ ಹುಲಿಗೊಪ್ಪನವರ, ಶೇಖರ ಕಬ್ಬೂರ, ಪತ್ರಪ್ಪ ಅಂಗಡಿ, ಶಿವನಗೌಡ ರಾಮನಗೌಡರ, ದುಂಡಯ್ಯ ಹಿರೇಮಠ, ಸಂಗಪ್ಪ ತಳವಾರ ಮೊದಲಾದವರು ಉಪಸ್ಥಿತರಿದ್ದರು.

ಬಿ.ಬಿ.ಹುಲಿಗೊಪ್ಪ ನಿರೂಪಿಸಿದರು. ಐ.ಕೆ.ಮಠಪತಿ ಸ್ವಾಗತಿಸಿದರು. ವೀರಪ್ಪ ಕಳಸನ್ನವರ, ವಿಜಯ ಕಳಸನ್ನವರ ಸಂಗೀತ ಸೇವೆ ನೀಡಿದರು. ನಾಗರಾಜ ದೊಡಮನಿ ದಾಸೋಹ ಸೇವೆಗೈದರು. ಕಾರ್ಯಕ್ರಮ ಮುಗಿದ ನಂತರ ಮಹಾಪ್ರಸಾದ ಜರುಗಿತು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group