ದತ್ತಿನಿಧಿ ಕಾರ್ಯಕ್ರಮ : ‘ದಾನ ಮಾಡಲು ಮನಸ್ಸು ಬೇಕು. ದಾನ ಸಾಹಿತ್ಯಕ ಮತ್ತು ಸಮಾಜಮುಖಿ ಕೆಲಸಕ್ಕೆ ಸದ್ಬಳಕೆಯಾಗಲಿ’ :ಡಾ. ಹೇಮಾವತಿ ಸೊನೋಳ್ಳಿ

Must Read

ಬೆಳಗಾವಿ – ದಾನ ಮಾಡುವ ಮನಸ್ಸು ಬೇಕು.ದಾನಗಳು ಸಮಾಜಮುಖಿ ಮತ್ತು ಸಾಹಿತ್ಯಕ ಕಾರ್ಯಕ್ರಮಗಳಿಗೆ ಬಳಕೆಯಾಗುವುದರ ಜೊತೆಗೆ ಸಂಘ-ಸಂಸ್ಥೆಗಳ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುತ್ತವೆ ಎಂದು ಲೇಖಕಿಯರ ಸಂಘಕ್ಕೆ 50000 ರೂಪಾಯಿಗಳ ದತ್ತಿ ದಾನ ನೀಡಿ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

️ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ದಿ.25 ರಂದು ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ವಿವಿಧ ದತ್ತಿ ದಾನಿಗಳ ‘ದತ್ತಿ ಕಾರ್ಯಕ್ರಮ’ ಜರುಗಿತು.

ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ, ಬಿಟ್ಟು ಹೋದವರು ಹೋಗುತ್ತಾರೆ, ಆದರೆ ಅವರ ನೆನಪುಗಳು ಅವರ ಆಶಯಗಳು ನೆನಪಾಗಿ ಉಳಿಯುತ್ತವೆ. ಆ ನಿಟ್ಟಿನಲ್ಲಿ ಜನಪದ ಸಾಹಿತ್ಯದ ಸೇವೆ ಮಾಡಿದ ಹಿರಿಯರ ಹೆಸರಿನಲ್ಲಿ ಜನಪದದ ಸೊಗಡನ್ನು ನೆನಪಿಸುವ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಜನಪದ ಸಾಹಿತ್ಯದ ತಾಯಿಬೇರು. ಅನಕ್ಷರಸ್ಥರಾದ ಬಹುತೇಕ ಕಲಾವಿದರ ಬಾಯಿಂದ ಬಾಯಿಗೆ ಹರಿದು ಬಂದ ಕಲೆಯಾಗಿದೆ. ಲೇಖನಿ ಇಲ್ಲದೆ ಎಲ್ಲಾ ಕಾರ್ಯಕ್ರಮ ಹಬ್ಬ-ಹರಿದಿನಗಳಲ್ಲಿ ಹಾಡುವ ರೀತಿ ನಿಜಕ್ಕೂ ಈಗಿನ ಪೀಳಿಗೆಗೆ ಆಶ್ಚರ್ಯ ತರುವುದು ಎಂದರು. ಈ ಸಂದರ್ಭದಲ್ಲಿ ದತ್ತಿ ದಾನಿಗಳಾದ ಹಮೀದಾ ಬೇಗಂ ದೇಸಾಯಿ, ಸುಮಾ ಕಿತ್ತೂರ ಅವರು ಮಾತನಾಡಿ ಹಿಂದಿನ ಹಿರಿಯರ ಔದಾರ್ಯ ಗುಣಗಳು ಅವರ ಮಾರ್ಗದರ್ಶನ, ಅವರ ಆದರ್ಶಗಳನ್ನು ನೆನೆದರು.

ದತ್ತಿ ದಾನಿ ಸುನಂದಾ ಎಮ್ಮಿ ರವರು, ಗೆಳೆತನ ಎಂಬುದು ಬಹಳ ಭಾವನಾತ್ಮಕವಾದುದು ಎಂದು ಜಾನಪದ ತ್ರಿಪದಿಗಳಲ್ಲಿ ಗೆಳೆತನದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ಸುಮಾ ಕಿತ್ತೂರ, ಸುನಂದಾ ಎಮ್ಮಿ, ರತ್ನಪ್ರಭಾ ಬೆಲ್ಲದ, ಆಶಾ ಪಾಟೀಲ, ಹಮೀದಾ ಬೇಗಂ ದೇಸಾಯಿ ರವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಬೆಳಗಾವಿಯ ‘ಪುಷ್ಕಲಾ ನೃತ್ಯಾಲಯ ‘ದ ತಂಡದ ಸದಸ್ಯರಿಂದ ಜನಪದ ಹಾಡುಗಳಿಗೆ ನೃತ್ಯ ಕಾರ್ಯಕ್ರಮ, ಮತ್ತು ಜಾನಪದ ಕಲಾವಿದೆ ಕಲಾವತಿ ದೋಣವಾಡಿ ರವರಿಂದ ಜನಪದ ಹಾಡುಗಳ ಗಾಯನ ಕಾರ್ಯಕ್ರಮ ನಡೆದವು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಡಾ.ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ,ಜ್ಯೋತಿ ಮಾಳಿ,ವಾಸಂತಿ ಮೇಳೆದ,ರುದ್ರಾಂಬಿಕಾ ಯಾಳಗಿ, ಪ್ರೇಮಾ ಅಂಗಡಿ, ಅಕ್ಕಮಹಾದೇವಿ ಹುಲಗಬಾಳಿ, ಸುನಿತಾ ಪಾಟೀಲ, ಶಿವಲೀಲಾ ಪಾಟೀಲ, ಅನ್ನಪೂರ್ಣ ಹಿರೇಮಠ, ಹೇಮಾ ಬರಬರಿ,ಪ್ರಭಾ ಪಾಟೀಲ, ಜಯಶ್ರೀ ನಿರಾಕಾರಿ ಶ್ರೀರಂಗ ಜೋಶಿ,ಮಧುಕರ ಗುಂಡೇನಟ್ಟಿ, ಎಸ್. ಎಸ್.ನಂದೆಪ್ಪನವರ, ಎಂ. ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ನಮ್ಮನ್ನು ಅಗಲಿದ ಜನಪ್ರಿಯ ಗಾಯಕಿ ಲತಾಮಂಗೇಶ್ಕರ್, ಹಿರಿಯ ಸಾಹಿತಿ ಚೆನ್ನವೀರ ಕಣವಿ, ನಟ ರಾಜೇಶ್, ಇತರರ ಆತ್ಮಕ್ಕೆ ಶಾಂತಿ ಕೋರಲಾಯಿತು. ಕಾರ್ಯಕ್ರಮದಲ್ಲಿ ಆಶಾ ಯಮಕನಮರಡಿ ಪ್ರಾರ್ಥಿಸಿದರು. ವಿದ್ಯಾ ಹುಂಡೇಕರ ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರು ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದರು. ಕೊನೆಯಲ್ಲಿ ಸುಧಾ ಪಾಟೀಲ ವಂದಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group