ಮೂಡಲಗಿ – ಇಂದು ನಡೆಯಲಿರುವ ರಾಷ್ಟ್ರ ಮಟ್ಟದ ಎನ್.ಎಮ್‌ಎಮ್‌ಎಸ್ ಪ್ರತಿಭಾನ್ವೇಷನಾ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಶುಭ ಹಾರೈಸಿದ್ದಾರೆ.
ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ನಿರ್ಭಯವಾಗಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.
ಬಿಇಓ ಮನ್ನಿಕೇರಿಯವರ ಸಂದೇಶ:
ಆತ್ಮೀಯ ವಿದ್ಯಾರ್ಥಿಗಳೇ,
ಇಂದು ದಿನಾಂಕ: ೨೭/೦೨/೨೦೨೨ ರಂದು ರಾಷ್ಟ್ರ ಮಟ್ಟದ ಎನ್.ಎಮ್.ಎಮ್.ಎಸ್ ಪ್ರಭಾನ್ವೇಷನೆ ಪರೀಕ್ಷೆಗಳು ಜರುಗಲಿವೆ. ಶಾಲಾ ಹಂತದಲ್ಲಿ ಕಳೆದ ಹಲವಾರು ದಿನಗಳಿಂದ ತಮ್ಮ ಶಾಲೆಯ ಎಲ್ಲ ಶಿಕ್ಷಕರು ಸಾಕಷ್ಟು ಉತ್ಸಾಹದಿಂದ ಪರೀಕ್ಷಾ ಪೂರ್ವ ಸಿದ್ಧತೆ ನಡೆಸಿರುತ್ತಾರೆ. ತಾವುಗಳು ಕೂಡಾ ಅಷ್ಟೇ ಉತ್ಸಾಹದಿಂದ ಪರೀಕ್ಷೆಗಾಗಿ ಸಿದ್ಧಗೊಂಡಿರುವಿರಿ. ನಿರ್ಭಯವಾಗಿ ಪರೀಕ್ಷೆಯನ್ನು ಎದುರಿಸಿ ಹೆಚ್ಚಿನ ಅಂಕ ಗಳಿಸಬೇಕೆಂದು ವಿದ್ಯಾರ್ಥಿಗಳನ್ನು ಕೋರಲಾಗಿದೆ.
ಇದೊಂದು ರಾಷ್ಟ್ರ ಮಟ್ಟದ ಪ್ರತಿಭಾನ್ವೇಷನೆ ಪರೀಕ್ಷೆಯಾಗಿದ್ದು ತಮ್ಮ ಪ್ರತಿಭೆಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತುತಪಡಿಸಲು ಉತ್ತಮ ವೇದಿಕೆಯಾಗಿರುತ್ತದೆ.
ಈ ಪರೀಕ್ಷೆಯಲ್ಲಿ ನಮ್ಮ ವಲಯದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶ್ರೇಷ್ಠ ಅಂಕಗಳನ್ನು ಗಳಿಸುವ ಮೂಲಕ ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಸರ್ಕಾರದಿಂದ ನೀಡಲಾಗುವ ಶಿಷ್ಯ ವೇತನ ಪಡೆಯಲು ಅರ್ಹತೆಯನ್ನು ಪಡೆಯುವಂತೆ ಹಾಗೂ ನಿರಾತಂಕವಾಗಿ ತಮ್ಮ ಮುಂದಿನ ವ್ಯಾಸಂಗವನ್ನು ಮುಂದುವರೆಸುವಂತೆ ತಮ್ಮನ್ನು ಕೋರಿದೆ.
ಈ ದಿನ ಎನ್.ಎಮ್.ಎಮ್.ಎಸ್ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಸಫಲತೆ ಲಭಿಸಲಿ ಎಂದು ಶುಭ ಹಾರೈಸುತ್ತೇವೆ.
ಎ ಸಿ ಮನ್ನಿಕೇರಿ.
ಕ್ಷೇತ್ರ ಶಿಕ್ಷಣಾಧಿಕಾರಿಗಳು,
ಮೂಡಲಗಿ