spot_img
spot_img

ಯುದ್ಧಗಳಿಗೆ ಅಜ್ಞಾನದ ರಾಜಕೀಯವೆ ಕಾರಣ

Must Read

- Advertisement -

ಪುರಾಣ,ಇತಿಹಾಸ ಕಾಲದಿಂದಲೂ ಯುದ್ಧಗಳಾಗಿರೋದಕ್ಕೆ ಕಾರಣವೆ ಅಧರ್ಮದ ರಾಜಕೀಯ ಕಾರಣವಾಗಿದೆ. ಇದನ್ನು ತಡೆಯಲು ದೇವಾನುದೇವತೆಗಳಿಗೂ ಕಷ್ಟವಾಯಿತು.ಹಾಗೆ ಸಾವು ನೋವುಗಳಾಗಿ ಭೂಮಿಯಲ್ಲಿ ಮತ್ತೆ ಮತ್ತೆ ಹುಟ್ಟಿ ಅದೇ ಅಜ್ಞಾನದಲ್ಲಿಯೇ ಜೀವನ ನಡೆಸುತ್ತಾ ಜ್ಞಾನದ ಕಡೆಗೆ ಹೋಗದೆ ಮಾನವ ಇಂದು ಕಲಿಯುಗದಲ್ಲಿ ಮಾಡಬಾರದ ಅನ್ಯಾಯ, ಅಧರ್ಮ,ಅಸತ್ಯದಲ್ಲಿಯೇ ರಾಜಕೀಯವನ್ನು ಬೆಳೆಸಿಕೊಂಡು ಈಗಲೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಅಜ್ಞಾನಕ್ಕೆ ತಳ್ಳಿ ಆಳುತ್ತಿರುವುದನ್ನು ಭಾರತೀಯರಾದವರು ಸಹಕರಿಸುತ್ತಿರುವುದೇ ದೊಡ್ಡ ವಿಪರ್ಯಾಸವೆಂದರೆ ತಪ್ಪಿಲ್ಲ. ಋಣಭಾರವನ್ನು ಹೊತ್ತಿರುವ ಜೀವಕ್ಕೆ ಧರ್ಮ  ಸಂಕಟ, ಋಣಮುಕ್ತರಾಗಲು ಹುಟ್ಟಿದ ಜೀವಕ್ಕೆ ಅಂದರೆ ಮಕ್ಕಳಿಗೆ ಕೊಡುವ ಶಿಕ್ಷಣವೇ ಋಣವನ್ನು ಬೆಳೆಸುವಂತಾಗಿರೋದೆ ಭಾರತೀಯರ ಎಲ್ಲಾ ಸಮಸ್ಯೆಗೆ ಕಾರಣ.

ವಿದೇಶಿಗರ ಸಾಲ,ಬಂಡವಾಳ,ಶಿಕ್ಷಣ, ವ್ಯವಹಾರವೆಲ್ಲ ಅವರ ರೋಗದ ರೂಪದಲ್ಲಿ ಅನುಭವಿಸಿರೋದು ಸತ್ಯ. ಈಗ ಅವರ ಯುದ್ದಕ್ಕೆ ಸಾಕ್ಷಿಯಾಗಿ ನಿಲ್ಲಬೇಕಾಗಿರೋದಂತೂ ಅಜ್ಞಾನಮಿತಿ ಮೀರಿರೋದನ್ನು ಸ್ಪಷ್ಟಪಡಿಸಿದೆ.

ನಮ್ಮೊಳಗಿರುವ ಅಜ್ಞಾನದಿಂದ ಬಿಡುಗಡೆ ಪಡೆಯಲು ರಾಜಯೋಗದ ಶಿಕ್ಷಣದ ಅಗತ್ಯವಿದೆ ಇದರಿಂದ ಶಾಂತಿ ನೆಲೆಸಬಹುದು.

- Advertisement -

ದಿನವಿಡೀ ಕ್ರಾಂತಿಯ ವಿಚಾರದಲ್ಲಿ ಮುಳುಗಿರುವ ಮಾನವನಿಗೆ ಜೀವನದ ಸತ್ಯ ಅರ್ಥ ಆಗಲು ಸಾಧ್ಯವಿಲ್ಲ. ಈ ಮಾತನ್ನು ಇಂದಿನ ಜ್ಞಾನಿಗಳೆನ್ನಿಸಿಕೊಂಡವರು,ಗುರು ಹಿರಿಯರು ಕಿರಿಯರಿಗೆ ತಿಳಿಸುವುದೇ ಪ್ರಜಾಧರ್ಮ.

ದೇಶದೊಳಗೆ ಇದ್ದು ನಾನೇ ಬೇರೆ ದೇಶವೇ ಬೇರೆ ಎನ್ನುವ ದ್ವಂದ್ವ ದ ರಾಜಕೀಯದಲ್ಲಿಅಧ್ಯಾತ್ಮ ಸಾಧನೆ ಮಾಡಿದರೆ ಇದೇ ಮುಂದೆ ಇನ್ನೊಂದು ಮಹಾಯುದ್ದಕ್ಕೆ ಕಾರಣವಾಗಬಹುದು. ಸತ್ಯ ಒಂದೇ, ದೇಶ ಒಂದೇ, ಧರ್ಮ ಒಂದೇ ತತ್ವವೂ ಒಂದಾಗಬೇಕಷ್ಟೆ. ತತ್ವದಲ್ಲಿ ತಂತ್ರವಿದ್ದರೆ ರಾಜಕೀಯವಾಗಿ ದ್ವೇಷ,ಅಸೂಯೆಯ ಅಸುರರೆ ಬೆಳೆಯೋದಷ್ಟೆ.

ಒಟ್ಟಿನಲ್ಲಿ ಒಗ್ಗಟ್ಟು, ಒಮ್ಮತ,ಸರಳ ಜೀವನ,ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ಜ್ಞಾನವನ್ನುರಾಜಕೀಯದಿಂದ ಬೆಳೆಸಲಾಗುವುದಿಲ್ಲ.ರಾಜಯೋಗದ ಅಗತ್ಯವಿದೆ. ಇದರ ಕೊರತೆಯೇ ಇಂದಿನ ಯುದ್ದಕ್ಕೆ ಕಾರಣ. ಯುದ್ದ ಬೇಕೆ? ಒಗ್ಗಟ್ಟು ಬೇಕೆ? ಇದು ತತ್ವಜ್ಞಾನಿಗಳೇ ಚಿಂತನೆ ಮಾಡಬೇಕಾಗಿದೆ.

- Advertisement -

ರಾಜಕೀಯ ಅತಿಯಾದಷ್ಟೂ ಕ್ರಾಂತಿಯೇ ಹೆಚ್ಚಾಗುತ್ತದೆ. ರಾಜಯೋಗ ಹೆಚ್ಚಾದಂತೆ ಶಾಂತಿ ನೆಲೆಸುತ್ತದೆ. ಯುದ್ದಗಳಾಗುವಷ್ಟು ಅಜ್ಞಾನದ ಅಹಂಕಾರ, ಸ್ವಾರ್ಥ ಬೆಳೆಯುವುದು ರಾಜಕೀಯದಿಂದ ಮಾತ್ರ. ಇಂದಿನ ದಿನಗಳಲ್ಲಿ ನಡೆಯುತ್ತಿರುವ ಸಾಕಷ್ಟು ಸಮಸ್ಯೆಗಳ ಹಿಂದೆ ರಾಜಕೀಯವೇ ಕಾರಣವಾದರೂ ಮಾನವನಿಗೆ ಮನರಂಜನೆ ಸಿಗೋದು ಅದರಲ್ಲಿಯೇ ಹೀಗಾಗಿ ಅದಕ್ಕೆ ಸಹಕಾರ ನೀಡುತ್ತಾ ತನ್ನ ತಾನರಿಯದೆ ನಾಶವಾಗುತ್ತಿರುವುದು ಸಾಮಾನ್ಯವಾಗಿದೆ.

ರಷ್ಯಾ ದಿಂದ ಬೇರ್ಪಟ್ಟ ಯುಕ್ರೇನ್ ಇಂದು ಪರಕೀಯರನ್ನು ನಂಬಿ ಕೆಟ್ಟಿದೆ. ಇಲ್ಲಿ ಎಲ್ಲಾ ಒಂದು ಪಾಠ ಕಲಿಯಬಹುದು. ನಾವೆಷ್ಟೇ ಹೊರಗಿನ ಸಹಕಾರಕ್ಕಾಗಿ ಮೂಲದಿಂದ ದೂರವಾದರೂ ಇದೊಂದು ತಾತ್ಕಾಲಿಕ ಸುಖವಷ್ಟೆ. ಮೂಲವನ್ನರಿತು ಅದರ ಋಣ ತೀರಿಸಲು ಶ್ರಮಪಟ್ಟು ಒಗ್ಗಟ್ಟಿನಿಂದ ಜೀವನ‌ ನಡೆಸೋದೆ ಧರ್ಮವೆನ್ನುತ್ತಾರೆ.

ಭೂಭಾರ ಕಡಿಮೆಯಾಗಲು ಇವೆಲ್ಲವೂ ನಡೆಯುತ್ತಿದೆ ಎನ್ನುವುದು ಒಂದು ಸತ್ಯವಾದರೆ ಮಾನವನ ಅಜ್ಞಾನದ ಅತಿರೇಖವೆ ಅವನ ವಿನಾಶಕ್ಕೆ ಕಾರಣವೆನ್ನುವುದೂ ಸತ್ಯ. ರಷ್ಯಾದ ಯುದ್ದದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸೋದು ಪ್ರಜೆಗಳೆ ಆದರೂ ಅದನ್ನು ಧರ್ಮ ಎಂದರೆ ಪ್ರಜಾಪ್ರಭುತ್ವದಲ್ಲಿ ಅಧರ್ಮ ವಾಗುತ್ತದೆ. ಇದೊಂದು ರಾಜಕೀಯವಷ್ಟೆ. ಇದು ಇತರ ದೇಶಗಳಿಗೂ ಒಂದು ಪಾಠವಾಗಬಹುದು.

ಅದರಲ್ಲೂ ನಮ್ಮ ಭಾರತ ಎಚ್ಚೆತ್ತುಕೊಂಡರೆ ಉತ್ತಮ. ಯುದ್ದದಿಂದ ಆಗುವ ಸಾವು ನೋವು ಕಷ್ಟ ನಷ್ಟಗಳನ್ನು ಅನುಭವಿಸೋದು ಇದ್ದವರೆ. ಸಾವು ನಿಶ್ಚಿತ ಆದರೆ ಅದಕ್ಕೆ ಮೊದಲು ಜ್ಞಾನದಿಂದ ಜೀವನದ ಉದ್ದೇಶ ತಿಳಿಯುವುದೇ ಮಾನವನ ಜನ್ಮಕ್ಕೆ ಕಾರಣ. ಆರನೇ ಅರಿವನ್ನು ಸದ್ಬಳಕೆ ಮಾಡಿಕೊಳ್ಳಲು ರಾಜಯೋಗದ ಶಿಕ್ಷಣದಿಂದ ಸಾಧ್ಯವೆನ್ನುವುದು ಮಹಾತ್ಮರ ಸಂದೇಶ. ರಾಜರ ಕಾಲದಲ್ಲಿ ಧರ್ಮ ರಕ್ಷಣೆಗಾಗಿ ಯುದ್ದಗಳಾಗುತ್ತಿತ್ತು. ಈಗಲೂ ಯುದ್ದವಿದೆ ಆದರೆ ಅದೊಂದು ಸ್ವಾರ್ಥ ಪೂರಿತ ವಿನಾಶಕ್ಕೆ ದಾರಿಯಾಗಿದೆ.

ವಿಶ್ವಕ್ಕೆ ಗುರುವಾಗೋ ಮೊದಲು ಮನೆಯೊಳಗಿರುವ ಗುರು ಪದವಿಗೆ ಗೌರವಿಸಿದರೆ ಶಾಂತಿ ಇರುತ್ತದೆ‌, ಭಾರತ ಮಾತೆ ಸ್ತ್ರೀ ಜ್ಞಾನದಿಂದ ಪವಿತ್ರವಾಗಿದ್ದಳು ಈಗ ಯಾವ ಮಾರ್ಗದಲ್ಲಿ ಸ್ತ್ರೀ ಯರನ್ನು ನಡೆಸಲಾಗುತ್ತಿದೆ? ಅಜ್ಞಾನದ ಶಿಕ್ಷಣವೇ ಎಲ್ಲದ್ದಕ್ಕೂ ಕಾರಣ. ಅದರೊಳಗೂ ರಾಜಕೀಯ ಭ್ರಷ್ಟಾಚಾರ ತುಂಬಿರೋದು ವಿಪರ್ಯಾಸ. ಯಾಕೆ ಪ್ರಜಾಶಕ್ತಿ ದೇಶವನ್ನು ಬಿಟ್ಟು ವಿದೇಶಿಗಳಿಗೆ ಮಣೆ ಹಾಕಿದೆ ಎಂದರೆ ವಿದೇಶಿ ಕಂಪನಿಗಳ ಕೈ ಕೆಳಗೆ ನಮ್ಮ ಜೀವನ ನಡೆದಿದೆ.

ಅವರ ಋಣ ತೀರಿಸಲು ಅವರ ಪರ ನಿಂತಿದೆ.ಆದರೆ, ನೆಲ ಜಲದ ಋಣ ತೀರಿಸಲು ವಿದೇಶಿಗರು ನಮ್ಮಧರ್ಮ, ಸಂಸ್ಕೃತಿ, ಭಾಷೆಯನ್ನು ಬೆಳೆಸುತ್ತಿಲ್ಲವೇಕೆ? ಈ ಪ್ರಶ್ನೆಗೆ ಉತ್ತರ ಅವರಿಗೆ ನಮ್ಮ ಶಿಕ್ಷಣದ ಸಾತ್ವಿಕತೆ, ಸತ್ಯದ ಅರಿವಿಲ್ಲ. ಆದರೆ ನಾವೇ ಅದನ್ನು ಬಿಟ್ಟು ಅವರಿಗೆ ಸಹಕಾರ ನೀಡಿರುವಾಗ ತಪ್ಪು ಅವರದ್ದಲ್ಲ. ತಪ್ಪು ನಮ್ಮೊಳಗೇ ಇದ್ದರೂ ಮೂರನೆಯವರ ತಪ್ಪು ಹಿಡಿದು ಜನಸಾಮಾನ್ಯರವರೆಗೆ ಕೆಟ್ಟ ಸುದ್ದಿಗಳನ್ನು ತಲುಪಿಸುವುದರಿಂದ ಶಾಂತಿ ಸಿಗುವುದೆ? ಸತ್ಯ ನಮ್ಮೊಳಗಿದೆ ಅದನ್ನು ಬಳಸಿದರೆ ಸಾಕು. ಆದರೆ, ಕಲಿಗಾಲದಲ್ಲಿ ಸತ್ಯ ನಡೆಯೋದಿಲ್ಲವಂತೆ.ಸಾಯೋದೂ ಇಲ್ಲ. ಇದ್ದಲ್ಲಿಯೇ ಇದ್ದು ಸತ್ಯ ತಿಳಿದರೆ ಜೀವಾತ್ಮನಿಗೆ ಶಾಂತಿ ಸಿಕ್ಕಿಮೂಲ ತಲುಪಬಹುದು. ಏನಂತೀರಾ?

ಮುಖ್ಯವಾಗಿ ಭಾರತದಲ್ಲಿ ಸ್ತ್ರೀ ಯರು ಅಧರ್ಮಕ್ಕೆ ಸಹಕಾರ ನೀಡಿರುವುದೆ ಭಾರತದಲ್ಲಿ ಅಧರ್ಮದ ರಾಜಕೀಯ ಶಕ್ತಿ ಬೆಳೆಯಲು ಕಾರಣವಾಗಿದೆ ಎಂದರೆ ಸ್ತ್ರೀ ಯರೆ ವಿರೋಧ ವ್ಯಕ್ತಪಡಿಸಬಹುದು. ಧರ್ಮ ಪತ್ನಿ,ಪತಿವ್ರತೆ ಪದಕ್ಕೆ ಅರ್ಥ ತಿಳಿಸುವ ಹಿಂದಿನ ಶಿಕ್ಷಣ ಇಂದಿಲ್ಲ. ಹೀಗಾಗಿ ಇದರಿಂದ ಕಷ್ಟ ನಷ್ಟವೂ ಸ್ತ್ರೀ ಶಕ್ತಿಯೇ ಅನುಭವಿಸುವುದೆನ್ನುವುದೂ ಪರಮಸತ್ಯ. ಪರಮಾತ್ಮನಿಗೆ ಸ್ತ್ರೀ ಪುರುಷರೆಂಬ ಲಿಂಗ ಬೇಧವಿದೆಯೆ?

ಅರ್ಧನಾರೀಶ್ವರನಿಂದಲೇ ಭೂಮಿ ನಡೆದಿರೋದು.ಇದನ್ನೇ ಎಲ್ಲಾ ಮಹಾತ್ಮರುಗಳೂ ತಿಳಿಸಿರೋದು. ವಿದೇಶದ ಯುದ್ದವನ್ನು ನೋಡಿ ಮೈಮರೆಯೋ ಬದಲಾಗಿ ಸ್ವದೇಶದ ಶಾಂತಿಯ ಕಡೆಗೆ ಗಮನಹರಿಸಿ ನಮ್ಮತನವನ್ನು ನಮ್ಮವರನ್ನು ಒಂದಾಗಿಸುವ ಕೆಲಸ ಧಾರ್ಮಿಕ ವರ್ಗದವರು ಮಾಡಿದರೆ ಉತ್ತಮವಲ್ಲವೆ? ಪ್ರಜಾಧರ್ಮ ಒಂದೆ. ಯಾರೂ ಇಲ್ಲಿ ಶಾಶ್ವತವೂ ಅಲ್ಲ ಸ್ವತಂತ್ರ ರೂ ಇಲ್ಲ. ಒಬ್ಬರನ್ನೊಬ್ಬರು ಅವಲಂಬಿಸಿಕೊಂಡಿರುವಾಗ ಯಾರೂ ಬೇರೆ ಬೇರೆ ಅಲ್ಲ. ಅಲ್ಲ ಅಲ್ಲ ಎನ್ನುವ ಪದವನ್ನು ಸಾಕಷ್ಟು ಬಳಸಿಕೊಂಡೇ ಮುಂದೆ ಬಂದೆವಲ್ಲ. ಈಗ ನಮ್ಮವರೆ ನಮಗೆ ದ್ವೇಷ ಮಾಡುವರಲ್ಲ ಕಾರಣ ನಾನೆಂಬುದಿಲ್ಲ ಎನ್ನುವ ಅದ್ವೈತವಿಲ್ಲ ಅದಕ್ಕೆ ಇದೆಲ್ಲಾ ಬೆಳೆದಿದೆಯಲ್ಲ. ಒಗ್ಗಟ್ಟಿನಲ್ಲೇ ಎಲ್ಲಾ ಸಮಸ್ಯೆಗೆ ಪರಿಹಾರವಿದೆಯಲ್ಲ. ಇದಕ್ಕೆ ಸತ್ಯಜ್ಞಾನ ಬೇಕಲ್ಲ.ಮಿಥ್ಯದ ವಿಜ್ಞಾನ ಬಿಡೋದಿಲ್ಲವಲ್ಲ. ಆಗೋದನ್ನು ತಡೆಯಲಾಗುವುದಿಲ್ಲವಲ್ಲ.

ಆದರೆ ಇದೇ ಜೀವನದ ಉದ್ದೇಶವಲ್ಲ.ಎಲ್ಲರಲ್ಲಿಯೂ ಅಡಗಿರುವ ಸಾತ್ವಿಕ ಶಕ್ತಿಗೆ ಉತ್ತಮ ಶಿಕ್ಷಣ ನೀಡಿಲ್ಲ. ಮುಂದೆಯಾದರೂ ನೀಡಬಹುದಲ್ಲ. ಹಿಂದೂ ಧರ್ಮ ಎಂದರೆ ನಮ್ಮ ಹಿಂದಿನವರ ಜ್ಞಾನವನ್ನು ತಿಳಿದು ನಡೆಯೋದಷ್ಟೆ. ಕೇವಲ ಪ್ರಚಾರಕ್ಕಷ್ಟೇ ಸೀಮಿತವಾದರೆ ಸಾಧ್ಯವಿಲ್ಲ. ಪರಕೀಯರ ಶಿಕ್ಷಣವೇ ಪರದೇಶದೆಡೆಗೆ ಹೋಗಲು ಕಾರಣ. ಸ್ವದೇಶದಲ್ಲಿ ಪರಕೀಯರನ್ನು ಕೂರಿಸಿಕೊಂಡು ಆಡಳಿತ ನಡೆಸುವ ಬದಲಾಗಿ ನಮ್ಮವರಿಗೆ ನಮ್ಮ ಶಿಕ್ಷಣದಿಂದ ಮೇಲೆತ್ತಿ ಸ್ವತಂತ್ರ ಜೀವನ ನಡೆಸಲು ಸಹಕರಿಸುವುದೆ ನಿಜವಾದ ಧರ್ಮ. ವಿದ್ಯೆಗಿಂತ ಜ್ಞಾನವೇ ಮೇಲು. ವಿಜ್ಞಾನದಲ್ಲಿ ಅಧ್ಯಾತ್ಮ ವನ್ನು ವಿಶೇಷವಾಗಿ ತಿಳಿದಾಗಲೇ ಶಾಂತಿ ಬೆಳೆಯುತ್ತದೆ.ಇದು ಭಾರತೀಯರ ವಿಜ್ಞಾನ.ನಂತರ ಭೌತಿಕ ವಿಜ್ಞಾನದ ಕಡೆ ನಡೆಯಬೇಕಿತ್ತು.ಮೂಲ ಬಿಟ್ಟು ರೆಂಬೆ ಕೊಂಬೆಗಳನ್ನು ಬೆಳೆಸಿರುವ ಶಿಕ್ಷಣದಿಂದ ಕ್ರಾಂತಿಯ ಯುದ್ದವೇ ಹೆಚ್ಚುತ್ತಿದೆ. ಶಾಂತಿಯಿಂದ ಮಾತ್ರ ಜೀವನ್ಮುಕ್ತಿ ಸಾಧ್ಯ ಎನ್ನುವುದು ಅಧ್ಯಾತ್ಮ.


(ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಬೇಕಾಗಿ ವಿನಂತಿ)

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group