- Advertisement -
ವಿಮಾನದಲ್ಲಿ ಸೀಟ್ ಮೇಲೆ, ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಎರಡು ಪ್ರಕರಣಗಳು ಮಾಸುವ ಮುನ್ನವೆ ಸೋಮವಾರ ಮತ್ತೊಂದು ಮೂತ್ರ ಪ್ರಕರಣ ವರದಿಯಾಗಿದ್ದು ಮಾನವ ಕುಲ ನಾಚಬೇಕಾದ ಪ್ರಸಂಗ ಉಂಟಾಗಿದೆ.
ಅಮೇರಿಕನ್ಏರ್ ಲೈನ್ಸ್ ನಲ್ಲಿ ನ್ಯೂಯಾರ್ಕ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ಧ ಭಾರತೀಯನೊಬ್ಬ ಸಹ ಪ್ರಯಾಣಿಕನೊಬ್ಬನ ಮೇಲೆ ಮೂತ್ರ ಮಾಡಿದ ಸಂಬಂಧ ಆತನನ್ನು ಬಂಧಿಸಲಾಗಿದೆ.
ಆರೋಪಿ ಪ್ರಯಾಣಿಕ ಮದ್ಯಪಾನ ಮಾಡಿದ್ದು ಆ ಸಮಯದಲ್ಲಿ ಉಂಟಾದ ಜಗಳದಲ್ಲಿ ಇನ್ನೋರ್ವ ವ್ಯಕ್ತಿಯ ಮೇಲೆ ಮೂತ್ರ ಮಾಡಿದ್ದಾನೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
- Advertisement -
ಅಮೇರಿಕನ್ ಏರ್ ಲೈನ್ಸ್ ಎಎ ೨೯೨ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಲೇ ನಿಲ್ದಾಣದ ಅಧಿಕಾರಿಗಳು ‘ಮೂತ್ರಿ’ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.