ಸಿಂದಗಿ; ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ 15 ರಿಂದ 30 ವಯೋಮಾನದ ಮಹಿಳೆಯರಿಗಾಗಿ ಮಾರ್ಚ್ 5 ರಂದು ಸಾಯಂಕಾಲ 4 ರಿಂದ 6 ಗಂಟೆವರೆಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಪ್ರಸಿದ್ಧ ಮಹಿಳೆಯರ, ಭಕ್ತ ಶಿರೋಮಣಿ ಮಹಿಳೆಯರ, ಮತ್ತು ಬೇಟಿ ಪಢಾವೋ ಬೇಟಿ ಬಚಾವೋ ಪರಿಕಲ್ಪನೆ ವಿಷಯದ ಚಿತ್ರಗಳನ್ನು ಬಿಡಿಸಲು ಅವಕಾಶ ಇರುತ್ತದೆ.
ವಿಜೇತರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಶಸ್ತಿ ಪತ್ರ ದೊಂದಿಗೆ ಬಹುಮಾನ ನೀಡಿ ಗೌರವಿಸಲಾಗುವುದು. ಆಸಕ್ತರು ತಮ್ಮ ಹೆಸರನ್ನು ಮುಂಚಿತವಾಗಿ ನೊಂದಾಯಿಸಿಕೊಳ್ಳಬೇಕು ಮತ್ತು ಸ್ಪರ್ಧೆಗೆ ಅಗತ್ಯವಿರುವ ಪರಿಕರಗಳನ್ನು ತರುವುದು. ಆಸಕ್ತರು ಹೆಚ್ಚಿನ ವಿವರಿಗಳಿಗಾಗಿ ಮೋ. 8073798117, 8792086587 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.