ಕೃತಜ್ಞತೆಯಿಲ್ಲದ ಮೂರ್ಖ ಹೇಳಿಕೆ

Must Read

ನಮ್ಮ ಭಾರತದ ಧ್ವಜ ಹಿಡಿದುಕೊಂಡು ಯುಕ್ರೇನ್ ಗಡಿ ದಾಟಿದೋ ಅಂತ ಹೆಮ್ಮೆಯಿಂದ ಹೇಳೋ ಬೇರೆ ಬೇರೆ ದೇಶದ ಮಕ್ಕಳಿಗೆ ಇರೋ ಕೃತಜ್ಞತೆ ನಮ್ಮ ದೇಶದ ಕೆಲವರಿಗೆ ಇಲ್ಲವಲ್ಲ ಅನಿಸುತ್ತಿದೆ. ಸ್ವಲ್ಪ ಬೆಸಿಕ್ ಅನಾಲಿಸಿಸ್ ಮಾಡೋ ಸ್ಕಿಲ್ ಬೆಳೆಸಬೇಕು ಮಕ್ಕಳಿಗೆ ಇಲ್ಲಾಂದ್ರೇ ಇವರ ಥರ ಪರಿಸ್ಥಿತಿ ಯ ಅರಿವೇ‌ ಇಲ್ಲದೇ ಏನೇನೋ ಮಾತನಾಡಬೇಕಾಗುತ್ತೆ ನ್ಯೂಸ್ ರೀಪೋರ್ಟರ್ ಸ್ವಲ್ಪ ತಿರುಗಿಸಿ ಕೇಳಬೇಕಿತ್ತು ಸರ್ಕಾರ ಯಾರಿಗೆ ,ಯಾವಾಗ ,ಎಲ್ಲಿ ಹೇಳಿದೆ ಭಾರತದ ವಿದ್ಯಾರ್ಥಿಗಳು ಇರುವ ಜಾಗದಿಂದಾನೆ ನಾವು ಕರದುಕೊಂಡು ಬರತ್ತಿದ್ದೇವೆ ಅಂತ. ಎಲ್ಲದರೂ ಇದ್ರೇ ತೋರಿಸು ಅಂತ ಕೇಳಬೇಕಿತ್ತು ಅವರು ಓಪನ್ ಆಗಿ ಹೇಳಿರೋದೇ ಗಡಿ‌ತನಕ ಹೇಗಾದರೂ ಬನ್ನಿ ಗಡಿ‌ದಾಟಿ, ಅಲ್ಲಿಂದ ನಮ್ಮ ಸರ್ಕಾರ ಕರೆದುಕೊಂಡು‌ ಬರುತ್ತೆ ಅಂತ ಇದನ್ನಾದರೂ‌ ಮಾಡಿದೆ ಭಾರತ ದೇಶದ ಸರ್ಕಾರ. ಬೇರೆ ದೇಶದವರು ಅದನ್ನೂ ಮಾಡಿಲ್ಲ ಬೇಕಿದ್ದರೆ ನೀವುಗಳೆ ಹೇಗೋ ದೇಶ ತಲುಪಿ ಅಂದಿದೆ,ಅಷ್ಟಕ್ಕೂ ಈ‌ ಹುಡುಗ ಏನು ನಮ್ಮ ಸೈನಿಕ ನಾ? ದೇಶ ಕಾಪಾಡೋಕೆ ಬೇರೆ ದೇಶಕ್ಕೆ ಹೋಗಿ‌ ಆ ದೇಶದಲ್ಲಿ‌ಸಿಕ್ಕಿಹಾಕಿಕೊಂಡಿದ್ನ, ತನ್ನ ದೇಶದ ಜನಗಳ ಕಾಪಾಡುವುದಕ್ಕೆ ಹೋಗಿದ್ನ ?ನಮ್ಮ‌ ದೇಶದವರು ನಮ್ಮನ್ನ ಉಕ್ರೇನ್ ಒಳಗೆ ಕಾಪಾಡೋಕೆ ಬರಲಿಲ್ಲ ನಾವೇ‌ ಬಂದೋ‌ ಬರೀ‌ಶೋ ಆಫ್ ಮಾಡುತ್ತಿದ್ದಾರೆ ಅನ್ನೋಕೆ!?

ಈ ಹುಡುಗ ಇಷ್ಟೇಲ್ಲಾ ಹೇಳಿದ್ನಲ್ಲಾ ಬಂದಿದ್ದು ಭಾರತ ದೇಶ‌ ರೆಡಿ ಮಾಡಿದ್ದ ವಿಮಾನದಲ್ಲಿ ಅದೂ ಫ್ರೀಯಾಗಿ ಹಾಗೆ ವಿಮಾನ ಹತ್ತೋಕ್ಕೆ ಮುಂಚೆ‌ ಉಳಿದಿದ್ದು ಭಾರತ‌ ದವರು ಆರೆಂಜ್ ಮಾಡಿದ ಹೋಟೆಲ್ ,ತಿಂದಿದ್ದು ಅವರು ಕೊಟ್ಟ ಬನ್ನು,ಬ್ರೆಡ್ಡು,ನೀರು,ಜ್ಯೂಸ್,ಮತ್ತೆ ಗಡಿ‌ ದಾಟೋಕೆ ಮುಂಚೆ ಬಳಸಿದ್ದು ರಷ್ಯಾ ಮತ್ತು ಉಕ್ರೇನ್ ಅವರು ತಂಟೆಗೆ ಬಾರದಂತೆ ಸಹಾಯ ಮಾಡುವ ಭಾರತದ ತ್ರಿವರ್ಣ ಧ್ವಜ.

ಈ ಕೆಲವು ಹುಡುಗರ ತಲೆಯಲ್ಲಿ ಮೊಸ್ಟ್ಲಿ ಮೆಡಿಕಲ್ ಸೈನ್ಸ್ ಡೀಟೆಲ್ಸ್ ತುಂಬಿ ಹೋಗಿ‌ ಕಾಮನ್ ಸೆನ್ಸ್ ಕಡಿಮೆ ಆಗಿರಬಹುದು ಅಥವಾ ಇಗೋ ಸೆನ್ಸ್ ಸ್ವಲ್ಪ ಜಾಸ್ತಿ‌ಆಗಿ‌ರಬಹುದು ಅಷ್ಟಿಲ್ಲದೇ ಹೇಳತ್ತಾರ‌‌ ಊರು ಉಪಕಾರ ಅರಿಯದು ಅಂತ.

ಕೊನೆಗೆ ಅನ್ಸೋದು ಪಾಪ ನವೀನ್ ಅಂತವರು ಉಕ್ರೇನ್ ಲಿ ಸಾಯಬಾರದಿತ್ತು.

ಬಿ.ಆರ್.ಸಾಹಿತ್ಯ
ಮೈಸೂರು


(ಭಾರತ ಸರ್ಕಾರದಿಂದ ಸಹಾಯ ಪಡೆದು ಭಾರತಕ್ಕೆ ಬಂದು ಮನತೋಚಿದಂತೆ ಹೇಳಿಕೆ ನೀಡುತ್ತಿರುವ ಕೆಲವು ವಿದ್ಯಾರ್ಥಿಗಳ ಹೇಳಿಕೆ ನೋಡಿ ನೊಂದು ಬರೆದ ಪತ್ರ)

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group