Homeಸುದ್ದಿಗಳುಕಸಾಪದಿಂದ ಡಾ. ಚನ್ನವೀರ ಕಣವಿ ಅವರಿಗೆ ನುಡಿನಮನ

ಕಸಾಪದಿಂದ ಡಾ. ಚನ್ನವೀರ ಕಣವಿ ಅವರಿಗೆ ನುಡಿನಮನ

ಮೂಡಲಗಿ: ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನದೀಪ್ತಿ ಪ್ರತಿಷ್ಠಾನ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ. 5ರಂದು ಬೆಳಿಗ್ಗೆ 11ಕ್ಕೆ ಮುನ್ಯಾಳ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಾನ್ನಿಧ್ಯವನ್ನು ದತ್ರಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಆನಂದರಾವ ನಾಯ್ಕವಹಿಸುವರು.

ಉದ್ಘಾಟನೆಯನ್ನು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ನೆರವೇರಿಸುವರು. ಡಾ. ಚನ್ನವೀರ ಕಣವಿ ಅವರ ಕುರಿತು ನಿವೃತ್ತ ಉಪನ್ಯಾಸಕಿ ಶಾಂತಾ ಜಿನಗಿ ಉಪನ್ಯಾಸವನ್ನು ನೀಡುವರು ಎಂದು ಕಸಾಪ ಕಾರ್ಯದರ್ಶಿ ಎ.ಎಚ್. ಒಂಟಗೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group