ಕೋಮುಗಲಭೆಗೆ ಪಿ.ಎಸ್.ಐ ಕುಮ್ಮಕ್ಕು: ಆರೋಪ

Must Read

ಬೀದರ್ – ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯ ಹಿನ್ನೆಲೆಯಲ್ಲಿ ದಿ. ೨೩ ರಂದು ಹುಮನಾಬಾದನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ನಾಲ್ವರು ಹಿಂದೂ ಕಾರ್ಯಕರ್ತರು ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಹಿಂದೂ ಕಾರ್ಯಕರ್ತರು ಮುಸ್ಲಿಂ ಸಮುದಾಯದ ಹುಡುಗರ ಮೇಲೆ ಪ್ರಕರಣ ಹಾಕಲು ಪಿ ಎಸ್ ಐ ಕುಮ್ಮಕ್ಕು ನೀಡಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಸರ್ವ ಸಮುದಾಯಗಳ ಪ್ರಜಾಪ್ರಭುತ್ವ ವೇದಿಕೆಯ ಇಮ್ರಾನ್ ಖಾನ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.

ಪಿ ಎಸ್ ಐ ವಿರುದ್ಧ ಪ್ರತಿಭಟನೆ ಮಾಡಿ ಅಮಾನತು ಮಾಡಲು ಆಗ್ರಹ ಮಾಡಿದ ಕಾರ್ಯಕರ್ತರು, ಬೀದರ್ ಬಸವಣ್ಣನವರ ನಾಡು ಇಲ್ಲಿ ಎಲ್ಲಾ ಧರ್ಮ ಸಮವಾಗಿ ಇವೆ. ಇಲ್ಲಿ ಹೆಣ್ಣು ಗಂಡು ಎರಡೇ ಜಾತಿ ಇವೆ ಎಂದರು.

ಮನವಿಪತ್ರ ಸಲ್ಲಿಕೆಗೂ ಮುನ್ನ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರಲ್ಲಿ ಪ್ರಮುಖರಾದ ಯಾಸೀನಲಿ ಮಾತನಾಡಿ, ಫೆ.27ರಂದು ಸಲ್ಲಿಸಿದ ದೂರಿನ ಮೇರೆಗೆ ಯಾರನ್ನು ಬಂಧಿಸದೇ ಪಿಎಸ್ಐ ಒಂದು ಕೋಮಿನ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಕರಣ ಕುರಿತಂತೆ ಸೋಮನಾಥ ಪಾಟೀಲ, ಡಿ.ಎನ್.ಪತ್ರಿ, ದಿನೇಶರೆಡ್ಡಿ, ಗೋಪಾಲಕೃಷ್ಣ ಮೊಹಳೆ, ಸಿದ್ದು ಹಿರೇಮಠ್ ಅವರ ಹೆಸರನ್ನು ಸೇರ್ಪಡೆ ಮಾಡಬೇಕು ಎಂದು ಯಾಸೀನ್ ಹಾಗೂ ಇಮ್ರಾನಖಾನ್ ಆಗ್ರಹಪಡಿಸಿದರು.

ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ರವಿಕುಮಾರ ಈ ಸಂದರ್ಭದಲ್ಲಿ ಹಾಜರಿದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group