ಜಲಜೀವನ ಮಿಷನ್ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ

Must Read

ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ವಿವಿಧ ಅನುಷ್ಠಾನ ಹಂತದಲ್ಲಿನ ತಾಂತ್ರಿಕ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ದಿನಾಂಕ -10-03-2022 ರಂದು

ಸ್ಥಳ-ಸಿ.ಬಿ ಕೋರೆ ಪಾಲಿಟೆಕ್ನಿಕ್, ಬಿ. ಕೆ. ಕಾಲೇಜ್ ಚಿಕ್ಕೋಡಿ.

ಜಿಲ್ಲಾ ಪಂಚಾಯತ್ ಬೆಳಗಾವಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದರ್ಶನ್ ಹೆಚ್.ವಿ. ರವರು ಉದ್ಘಾಟಿಸಿದರು.

ಮಾನ್ಯ ಯೋಜನಾ ನಿರ್ದೇಶಕರು ಬೆಳಗಾವಿ ರವಿ ಬಂಗಾರಪ್ಪನವರ,‌ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಅಧೀಕ್ಷಕ ಅಭಿಯಂತರರು ಸಿ. ಜಿ. ಹುಲಿಮನಿ ,ಭೂ ವಿಜ್ಞಾನಿ ಡಾ. ಬಿ.ಕೆ. ಪುರಂದರ ಮತ್ತು ನಿವೃತ್ತ ಅಧೀಕ್ಷಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ ಬೆಳಗಾವಿ ಹಾಗೂ ಸಚಿನ್ ಉಸೂಳಕರ್ ಮುಖ್ಯ ಅತಿಥಿಗಳ ಸ್ಥಾನ ಅಲಂಕರಿಸಿ ಮಾತನಾಡಿದರು.

ಎ. ಎಸ್ ಬಣಗಾರ್ ಮಾನ್ಯ ಕಾರ್ಯ ನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ ಕಾರ್ಯಕ್ರಮದ ಉಪಸ್ತಿತ್ವ ವಹಿಸಿದ್ದರು.

ಹಾಗೂ ಡಿ ಪಿ ಎಂ ದೀಪಕ್ ಕೆ, ನೀಲಮ್ಮ ಕಮತೆ ಮತ್ತು ಐ ಎಸ್ ಎ ತಂಡದ ನಾಯಕ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group