Homeಸುದ್ದಿಗಳುನಗರದ ಸೌಂದರ್ಯೀಕರಣ ಕಾಮಗಾರಿಗೆ ಮನಗೂಳಿ ಚಾಲನೆ

ನಗರದ ಸೌಂದರ್ಯೀಕರಣ ಕಾಮಗಾರಿಗೆ ಮನಗೂಳಿ ಚಾಲನೆ

ಸಿಂದಗಿ: ಲಭ್ಯವಿರುವ ಕೆಲವೆ ಕೆಲವು ಅನುದಾನದಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಗರದ ಸೌಂದರ್ಯೀಕರಣ ಹಾಗೂ ಸ್ವಚ್ಛತೆಗೆ ಆದ್ಯತೆಕೊಟ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದು ಪುರಸಭೆಯ ಅಧ್ಯಕ್ಷ  ಶಾಂತವೀರ ಮನಗೂಳಿ ತಿಳಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ  ಯೋಜನೆಯಡಿ ಒಂದು ಕೋಟಿ ಅಂದಾಜು  ಮೊತ್ತದ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪುರಸಭೆಯ ಎಸ್ ಎಫ್ ಸಿ ಹಾಗೂ ಇತರೆ ಅನುದಾನವನ್ನು ನೀಡುವಲ್ಲಿ ತಾರತಮ್ಯ ಮಾಡಲಾಗಿದ್ದು ಕೂಡಲೆ ಶಾಸಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಗಣನೀಯವಾಗಿ ಕಡಿಮೆ ಮಾಡಿದ್ದು ವಿಷಾದನೀಯ, ಬಂದಿರುವ ಅನುದಾನ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ, ಹೆಚ್ಚಿನ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಲಾಗುವದು ಎಂದರು ಅಮೃತ ನಿರ್ಮಲ ಯೋಜನೆಯಡಿ  ಬಸವೇಶ್ವರ ವೃತ್ತದಲ್ಲಿ ಹಾಗೂ ಕಾಗಿ ದವಾಖಾನೆ ಹತ್ತಿರ ಹೈಟೆಕ್ ಶೌಚಾಲಯ , ವಿವೇಕಾನಂದ ವೃತ್ತ ದಿಂದ ಬಸವೇಶ್ವರ ವೃತ್ತದವರೆಗೆ ಡಿವೈಡರ್ ಗಳಿಗೆ ಗ್ರಿಲ್ ಅಳವಡಿಸುವದು ಹಾಗೂ ಡಿವೈಡರ್  ಮಧ್ಯದಲ್ಲಿ ಸಸಿ ನೆಡುವದು, ಘನತ್ಯಾಜ್ಯ ವಸ್ತು ವಿಲೆವಾರಿ ಘಟಕದಲ್ಲಿ ಕಂಪೌಂಡ ನಿರ್ಮಿಸುವುದು ಮುಂತಾದ ಅಭಿವೃದ್ದಿ ಜೊತೆಗೆ ನಗರಕ್ಕೆ ಅವಶ್ಯಕವಿರುವ , ಯಂತ್ರೋಪಕರಣಗಳನ್ನು ಖರೀದಿಸಲಾಗುವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಪ್ರತಿಭಾ ಶಿವಕುಮಾರ ಕಲ್ಲೂರ, ಭೀಮು ಕಲಾಲ ನಾಯಕರಾದ ಗೊಲ್ಲಾಳಪ್ಪ ಗೌಡ ಪಾಟೀಲ , ಪ್ರವೀಣ ಕಂಟಿಗೊಂಡ ಸಿದ್ದಣ್ಣ ಹದನೂರ, ರಾಜಶೇಖರ ಕೂಚಬಾಳ, ಮಹಮದ್ ಪಟೇಲ ಬಿರಾದಾರ, ಯಮನೇಶ ಮಾಗಣಗೇರಿ ಹಾಗೂ ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group