ರಾಶಿ ಯಂತ್ರದಲ್ಲಿ ಸಿಲುಕಿ ರುಂಡ-ಮುಂಡ ಬೇರ್ಪಟ್ಟು ಮಹಿಳೆ ದಾರುಣ ಸಾವು

Must Read

ಬೀದರ – ರಾಶಿ ಯಂತ್ರದಲ್ಲಿ ಸಿಲುಕಿ ರುಂಡ – ಮುಂಡ ಬೇರ್ಪಟ್ಟು ಮಹಿಳೆ ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ತಾಲೂಕಿನ ಕುರನಳ್ಳಿ ಗ್ರಾಮದಲ್ಲಿ ನಡೆದಿದೆ.

27 ವರ್ಷದ ಸುವರ್ಣ ಬಾಲಾಜಿ ಚಿಕಲೆ ಎಂಬ ಮಹಿಳೆ ದುರಂತ ಸಾವನ್ನಪ್ಪಿದ್ದು ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯವೆ ಮಹಿಳೆ ಸಾವಿಗೆ ಕಾರಣವಾಗಿದೆ. ರಾಶಿ ಬಳಿಕ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಒಮ್ಮೆಲೇ ಗಾಡಿ ಮುಂದಕ್ಕೆ ಚಲಿಸಿದ್ದು ಈ ವೇಳೆ ಮೃತ ಸುವರ್ಣಗೆ ವಾಹನ ತಗುಲಿ ರಾಶಿ ಯಂತ್ರದ ಪಾಯಿಂಟ್ ನಲ್ಲಿ ಸಿಲುಕಿದ್ದಾರೆ. ಟ್ರ್ಯಾಕ್ಟರ್ ಜಾಯಿಂಟ್‌ ನಲ್ಲಿ ಕೂದಲು ಸಿಲುಕಿ ಕುತ್ತಿಗೆಗೆ ಭಾರಿ ಗಾಯವಾಗಿ ದೇಹದಿಂದ ರುಂಡ ಬೇರ್ಪಟ್ಟು ಕೂಲಿ ಕೆಲಸ ಕ್ಕೆ ಬಂದಿದ್ದ ದುರ್ದೈವಿ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.

ಪತ್ನಿ ಬಾಲಾಜಿ ನೀಡಿದ ದೂರಿನ ಮೇಲೆ ಜನವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group