ರೂಹಿಲ್ಲದ ಚೆಲುವೆ ಅಕ್ಕಮಹಾದೇವಿ: ಗಿರೀಜಾ ಪಾಟೀಲ

Must Read

ಬಸವನಬಾಗೇವಾಡಿ: ಕನ್ನಡ ನೆಲದ ಅಭೂತಪೂರ್ವವಾದ ವೀರ ವಿರಾಗಿಣಿ ಅಕ್ಕಮಹಾದೇವಿ. ಅವಳ ಅಂತರಂಗ-ಬಹಿರಂಗ ಏಕೋಮಯವಾಗಿ ಹೆಪ್ಪಿಟ್ಟ ಹಾಲು ಮೊಸರಾಗಿ ಮಜ್ಜಿಗೆಯಾಗಿ ಬೆಣ್ಣೆಯಾಗಿ ತುಪ್ಪ ವಾಗುವ ತೆರೆದಿ ಅಕ್ಕ ರೂಪಿನ ರೂಪವಾಗಿ ರೂಹಿಲ್ಲದ ಚೆಲುವೆಯಾದವಳು. ಅಖಂಡ ಜ್ಞಾನಿಗಳಾದ ಅಲ್ಲಮನ ಪ್ರಶ್ನೆಗಳಿಗೆ ಉತ್ತರ ನೀಡಿ ಅಲ್ಲಮನಿಂದ ಜಗದಕ್ಕ ಎಂದು ಬಿರುದಾಂಕಿತರಾದಳು. ಅಕ್ಕ ಜೀವನವನ್ನು ಆಧ್ಯಾತ್ಮಿಕ ಅನುಸಂಧಾನದಿಂದ ಜೀವನವನ್ನು ಪಾವನಗೊಳಿಸಿ ಕೊಂಡವಳು ಎಂದು ಇವರು ತಾಲೂಕು ಶರಣ ಸಾಹಿತ್ಯ ಪರಿಷತ್ತು, ಮಸಬಿನಾಳದ ದಾಸೋಹ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಲಿಂ. ಮರಗೆವ್ವ ಮತ್ತು ಮಲಕಾಜಪ್ಪ ಅಳ್ಳಗಿ, ಲಿಂ. ಬಿ. ಎಸ್. ಪಾಟೀಲ್ ಮಹಾರಾಜರು, ಲಿಂ. ಸಿದ್ಧಲಿಂಗವ್ವ ಮತ್ತು ಬಸಲಿಂಗಯ್ಯ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಫ್.ಡಿ. ಮೇಟಿ ಅವರು 12ನೇ ಶತಮಾನದಲ್ಲಿ ಶರಣರು ನುಡಿದಂತೆ ನಡೆದರು. ಶರಣರು ದಾರಿ ತಪ್ಪಿದಾಗ ಅವರ ಪತ್ನಿಯರು ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು. ಶರಣರು ಕಾಯಕ, ದಾಸೋಹ, ಅನುಭವ ಇವುಗಳನ್ನು ಅನೂಚಾನುವಾಗಿ ನಡೆಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಂಡರು ಎಂದು ಹೇಳಿದರು. ಆರ್. ಜಿ. ಅಳ್ಳಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೀರಣ್ಣ ಮರ್ತೂರ ಅವರು ಶರಣ ಸಾಹಿತ್ಯ ಪರಿಷತ್ತಿನ ಕುರಿತು ಮಾತನಾಡಿದರು. ಪೂಜ್ಯ ಸಾನಿಧ್ಯ ವಹಿಸಿದ್ದ ಶ್ರೀ. ಮ. ನಿ.ಪ್ರ ಸಿದ್ಧರಾಮ ಮಹಾಸ್ವಾಮಿಗಳು, ದಾಸೋಹ ಸಂಸ್ಥಾನ ಮಠ, ಮಸಬಿನಾಳ ಇವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಚನ್ನಪ್ಪ ಅಳ್ಳಗಿ ಸಹೋದರರು, ವೀರೇಶ್ ಕುಂಟೋಜಿ, ಪಿ. ಎಲ್. ಹಿರೇಮಠ, ಎಸ್. ಕೆ. ಸೋಮನಕಟ್ಟಿ, ಎಸ್. ಐ. ಮನಗೂಳಿ,ವಿವೇಕಾನಂದ ಕಲ್ಯಾಣಶೆಟ್ಟಿ, ಬಸವರಾಜ ಹಡಪದ ಉಪಸ್ಥಿತರಿದ್ದರು. ಶರಣು ಬಸ್ತಾಳ ಪ್ರಾರ್ಥಿಸಿದರು. ಎಸ್.ಟಿ.ಮಿರಗಿ ನಿರೂಪಿಸಿದರು. ಎಸ್.ಬಿ. ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group