spot_img
spot_img

ಪ್ರಜಾಪ್ರಭುತ್ವದಲ್ಲಿ ರಾಜಕೀಯದಿಂದ ಶಾಂತಿ ಕಷ್ಟ

Must Read

spot_img
- Advertisement -

ರಷ್ಯಾ ಉಕ್ರೇನ್ ಯುದ್ದ ನೋಡಿ ಇತರ ದೇಶಗಳು ಪಾಠ ಕಲಿತರೆ ಉತ್ತಮ. ಕೊನೆಪಕ್ಷ ಶಾಂತಿಗೆ ಹೆಸರಾಗಿದ್ದ ಭಾರತೀಯರು ಎಚ್ಚರವಾದರೆ ಅತ್ಯುತ್ತಮ. ಇಲ್ಲಿ ಉಕ್ರೇನ್ ರಷ್ಯಾದ ಒಂದು ಭಾಗವಾಗಿತ್ತು. ಯಾವಾಗ ದೂರವಾಗಿ ತನ್ನದೇ ರಾಜಕೀಯದಲ್ಲಿ ಮೈ ಮರೆತು ಪರರ ಕೈ ಜೋಡಿಸಿಕೊಂಡು ಬಲವಾಗಲು ಮುಂದೆ ನಡೆಯಿತೋ ಮೂಲದ ದ್ವೇಷಕ್ಕೆ ಬಲಿಯಾಗಿ ತನ್ನ ಜನರನ್ನೇ ಬಲಿಕೊಡುವ ಸ್ಥಿತಿಗೆ ಬಂದಿದೆ.

ಹಾಗೆಯೇ ಮೂಲವೂ ತನ್ನ ಒಂದು ಭಾಗವನ್ನು ತಾನೇ ಧ್ವಂಸ ಮಾಡುತ್ತಾ ತನಗೆ ತಾನೇ ಮೋಸ ಹೋಗಿರುವ‌ ಸತ್ಯ ತಿಳಿಯದೆ ವಿನಾಶದ ಕಡೆಗೆ ನಡೆದಿದೆ. ದೂರದಲ್ಲಿ ನಿಂತು ಹೊರಗಿನಿಂದ ನಿಂತು ನೋಡುವ ಇತರ ದೇಶಗಳಿಗೆ ಇದು ಅರ್ಥ ವಾದರೂ ಒಳಹೊಕ್ಕಿ ಸಂಧಾನ ಮಾಡುವ ಅಧಿಕಾರವಿಲ್ಲ.

ಹೀಗಾಗಿ ಯಾರೇ ಆಗಿರಲಿ ಎಲ್ಲೇ ಆಗಿರಲಿ ನಮ್ಮನ್ನು ಅಧಿಕಾರದ ಮದದಲ್ಲಿ ಅಧರ್ಮದಿಂದ ಆಳುತ್ತಿದ್ದರೆ ಅವರ ವಿರುದ್ದ ನಿಂತು ಪ್ರಶ್ನೆ ಮಾಡಬಹುದು. ಇಲ್ಲ ಅಸಹಕಾರದಿಂದ ದೂರ ಉಳಿದರೆ ಆಗ ಬಲವಿಲ್ಲದೆ ಸೋತುಹೋಗುತ್ತಾರೆ. ಆದರೆ, ಇಂದಿನ ದಿನ ಭೌತಿಕ ಜಗತ್ತಿನಲ್ಲಿ ರಾಜಕೀಯಕ್ಕೆ ಸಹಕಾರ ಕೊಡುತ್ತಾ ನಮ್ಮ ಆಂತರಿಕ ಒಗ್ಗಟ್ಟು ಬಿಟ್ಟು ಬಿಕ್ಕಟ್ಟನ್ನು ಹೆಚ್ಚಿಸಿಕೊಂಡು ಕೊನೆಗೆ ಕಷ್ಟ ನಷ್ಟಗಳಿಂದ, ಸಾವು ನೋವುಗಳಿಂದ ಜೀವ ಹೋಗುತ್ತಿರುವುದಕ್ಕೆ ಕಾರಣವೆ ನಮ್ಮದೇ ಸಹಕಾರ.

- Advertisement -

ಇದು ಸದಾಚಾರ,ಸತ್ಯ,ಧರ್ಮ, ನ್ಯಾಯ,ನೀತಿಗೆ ನೀಡಿದ್ದರೆ ಶಾಂತಿ ಮನೆ ಮನೆಯಲ್ಲಿ ಸಿಗುತ್ತಿತ್ತು. ಇದನ್ನು ಬಿಟ್ಟು ಹೊರನಡೆದವರಿಗೆ ಕ್ರಾಂತಿಯೇ ಕಾಣುತ್ತಿದೆ. ಇದೇ ದ್ವೇಷವೆ ಮುಂದೆ ಯುದ್ದಕ್ಕೆ ಕಾರಣವಾದರೆ ಅದರ ಪ್ರತಿಫಲ ಇಡೀ ದೇಶ ವಿಶ್ವವೇ ಅನುಭವಿಸೋದೆನ್ನುವ ಸತ್ಯ ತಿಳಿದಾಗಲೆ ಜನ ಎಚ್ಚೆತ್ತುಕೊಳ್ಳಲು ಸಾಧ್ಯ.

ಆದರೆ ಪ್ರಚಾರಕರಿಗೆ ಕ್ರಾಂತಿಯ ಸುದ್ದಿಯಿಂದಲೇ ಹೊಟ್ಟೆ ತುಂಬುವಾಗ ಯಾರ ಜೀವಕ್ಕೂ ಬೆಲೆಕೊಡದೆ ಮನೆ ಮನೆಗೆ ನಕಾರಾತ್ಮಕ ಸುದ್ದಿ ತಲುಪಿಸಿದರೆ ಅವರೂ ಮಧ್ಯದಲ್ಲಿ ಸಿಲುಕುವುದಂತೂ ಸತ್ಯ.

ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಭವಿಷ್ಯದಲ್ಲಿ ಶಾಂತಿ ನೆಲೆಸಲು ಭಾರತದಂತಹ ಜ್ಞಾನಿಗಳ ದೇಶ ಈಗಲಾದರೂ ತನ್ನ ಮೂಲದ ಕಡೆಗೆ ನಡೆಯುವ ಪ್ರಯತ್ನಪಟ್ಟರೆ ಉತ್ತಮ ಬದಲಾವಣೆ ಸಾಧ್ಯ. ಇದಕ್ಕೆ ಮುಖ್ಯವಾಗಿ ಮಾಧ್ಯಮಗಳು ಮಧ್ಯವರ್ತಿಗಳು ಸಹಕರಿಸುವುದು ಧರ್ಮ.

- Advertisement -

ದೇಶದ ಪ್ರಜೆಗಳಾಗಿ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡೋದು ಪ್ರಜಾಧರ್ಮ. ಏನು ಕೊಡುವೆವೋ ಅದೇ ತಿರುಗಿ ಸಿಗೋದು. ಇದೇ ಕರ್ಮ ಸಿದ್ದಾಂತ. ಪ್ರಜಾಪ್ರಭುತ್ವದಲ್ಲಿ ರಾಜಯೋಗದಿಂದ ಶಾಂತಿ ಕಾಣಬಹುದು. ರಾಜಕೀಯದಿಂದ ಕಷ್ಟ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಬಸವ ಜಯಂತಿ ಆಚರಣೆಗೆ ಹರ್ಡೇಕರ್ ಮಂಜಪ್ಪನವರೆ ಮೂಲ ಕಾರಣಕರ್ತರು – ಪ್ರೊ. ಶ್ರೀಕಾಂತ್ ಶಾನವಾಡ.

ಬೆಳಗಾವಿ - ಇದೇ ಫೆ. ೨೩  ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಹರ್ಡೇಕರ್ ಮಂಜಪ್ಪನವರ ಬದುಕು...
- Advertisement -

More Articles Like This

- Advertisement -
close
error: Content is protected !!
Join WhatsApp Group