ಸಿಂಧುತ್ವ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ನೇಣಿಗೆ ಶರಣು

Must Read

ಬೀದರ – ಬೀದರ್ ಜಿಲ್ಲೆಯಲ್ಲಿ ಸಿಂಧುತ್ವ ಪ್ರಮಾಣಪತ್ರ ಬಾರದ್ದರಿಂದ ಬೇಸತ್ತ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಕುಮಾರಚಿಂಚೋಳಿ ಗ್ರಾಮದ ಓಂಕಾರ ರೇವಣಪ್ಪ ಶೇರಿಕಾರ (35) ಭಾನುವಾರ ನಸುಕಿನ ಜಾವ ತಮ್ಮ ಹೊಲದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತನಿಗೆ 4 ಜನ ಹೆಣ್ಣು ಮಕ್ಕಳಿದ್ದು, ನೌಕರಿ ಖಾಯಂ ಆಗುವ ಭರವಸೆ ಮೇಲೆ ಬಾಕಿ ಮಾಡಿಕೊಂಡಿದ್ದ ಓಂಕಾರ ಶೇರಿಕಾರ, ಈಗಾಗಲೇ ಇಬ್ಬರ ಮಕ್ಕಳ ಮದುವೆ ಮಾಡಿದ್ದು ರಾಜ್ಯ ಸರ್ಕಾರದಿಂದ ಗೊಂಡ ಎಸ್.ಟಿ.ಪ್ರಮಾಣಪತ್ರ ಆಧಾರದ ಮೇಲೆ ನೇಮಕಗೊಂಡಿದ್ದನೆನ್ನಲಾಗಿದೆ.

ಪ್ರಮಾಣಪತ್ರ ಪರಿಶೀಲನೆಗಾಗಿ ಕಲ್ಬುರ್ಗಿಗೆ ಕಳಿಸಲಾಗಿದೆ. ವ್ಯಕ್ತಿ ಸಾವಿಗೆ ರಾಜ್ಯ ಸರ್ಕಾರ ಸಿಂಧುತ್ವ ಕಲ್ಪಿಸದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಇದ್ದಾನೆ ಎಂದು ಗೊಂಡ ಸಮಾಜದ ಮುಖಂಡರು ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಘಟನೆಗೆ ನೇರವಾಗಿ ರಾಜ್ಯ ಸರ್ಕಾರದ ಧೋರಣೆಯೇ ಕಾರಣ ಎಂದು ಎಸ್.ಟಿ.ಗೊಂಡ ಮುಖಂಡರು ನ್ಯಾಯವಾದಿ ಸತೀಶ ರಾಂಪೂರೆ ಆಕ್ರೋಶ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group