ಮೂಡಲಗಿಯಲ್ಲಿ ಶೀಘ್ರದಲ್ಲೇ ನಾಮದೇವ ಶಿಂಪಿ ಯುವಕ ಸಂಘ

Must Read

ಮೂಡಲಗಿ – ಇತ್ತೀಚೆಗೆ ಮೂಡಲಗಿಯ ಶ್ರೀ ವಿಠ್ಠಲ ಮಂದಿರದಲ್ಲಿ ನಾಮದೇವ ಶಿಂಪಿ ಸಮಾಜವು ನಡೆಸಿದ ಸಭೆಯಲ್ಲಿ ಬೆಳೆಯುತ್ತಿರುವ ಈ ಯುಗದಲ್ಲಿ ಎಲ್ಲಾ ಸಮಾಜದಲ್ಲಿ ಇರುವಂತೆ ನಾಮದೇವ ಶಿಂಪಿ ಸಮಾಜದಲ್ಲೂ ಕೂಡ ಯುವಕರ ಸಂಘಟನೆ ಅವಶ್ಯವಾಗಿದ್ದು ಸಮಾಜದ ಕಾರ್ಯಗಳ ಜೊತೆಯಲ್ಲಿ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಲು ಯುವಕರು ಮುಂದಾಗಬೇಕಾಗಿದೆ. ಅದಕ್ಕಾಗಿ ಸ್ಥಳೀಯ ನಾಮದೇವ ಶಿಂಪಿ ಯುವಕರನ್ನು ಸೇರಿಸಿ ಸಭೆಯಲ್ಲಿ ಚರ್ಚೆ ಮಾಡಿ ಸಮಾಜದ ಹಿರಿಯರೆಲ್ಲರೂ ಶೀಘ್ರದಲ್ಲೇ ಯುವಕ ಸಂಘವನ್ನು ಸ್ಥಾಪನೆ ಮಾಡಲು ನಿರ್ಧರಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀರಂಗ ಮಂದ್ರೋಳಿ, ಉಪಾಧ್ಯಕ್ಷರಾದ ಗಂಗಾರಾಂ ರೇಳೆಕರ, ಕಾರ್ಯದರ್ಶಿ ಜಗದೀಶ್ ಮಂದ್ರೋಳಿ, ಸದಸ್ಯರಾದ ಪಾಂಡುರಂಗ ಮಹೇಂದ್ರಕರ, ಪಾಂಡುರಂಗ ಮಂದ್ರೋಳಿ, ಅಶೋಕ ಇತಾಪೆ, ಗಜಾನನ ರೇಳೆಕರ, ಶಂಕರ ಕೊಂಕಣಿ, ಪುಂಡಲೀಕ ರೇಳೆಕರ, ಶ್ರೀಪಂತ ಹಾವಳ, ಪ್ರಕಾಶ ಮಂದ್ರೋಳಿ ಮತ್ತು ಯುವಕರೆಲ್ಲರೂ ಹಾಜರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group