Homeಸುದ್ದಿಗಳುಗ್ರಾಮ ಸದಸ್ಯನ ಮದುವೆಯಲ್ಲಿ ಗನ್ ತಲ್ವಾರ ಸಹಿತ ಬಿಂದಾಸ್ ಡ್ಯಾನ್ಸ್

ಗ್ರಾಮ ಸದಸ್ಯನ ಮದುವೆಯಲ್ಲಿ ಗನ್ ತಲ್ವಾರ ಸಹಿತ ಬಿಂದಾಸ್ ಡ್ಯಾನ್ಸ್

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಮದುವೆಯೊಂದರಲ್ಲಿ ಯುವಕರು ಗನ್ ಮತ್ತು ತಲ್ವಾರ ಜೊತೆಗೆ ಬಿಂದಾಸ್ ಆಗಿ ನಡು ರಸ್ತೆಯಲ್ಲಿ ಹಿಡಿದು ಕುಣಿದಿದ್ದು ಸಾರ್ವಜನಿಕರ ವಲಯದಲ್ಲಿ ಆತಂಕ ಮೂಡಿಸಿದೆ.

ಮದುವೆಯ ಬಳಿಕ ವಧು – ವರರ ಮೆರವಣಿಗೆಯಲ್ಲಿ ಯುವಕರು ಕೈಯಲ್ಲಿ ಗನ್, ಕತ್ತಿ ಹಿಡಿದು ಬಿಂದಾಸಾಗಿ ಡ್ಯಾನ್ಸ್ ಮಾಡಿದ ಘಟನೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದಿದೆ.

27 ರಂದು ಅಲಿಯಂಬರ್ ಗ್ರಾಮ ಪಂಚಾಯತ್ ಸದಸ್ಯ ಮಹಾದೇವ ಬಿರಾದಾರ್ ಎಂಬುವರ ಮದುವೆಯ ಮೆರವಣಿಗೆಯ ವಿಡಿಯೋ ಸದ್ಯ ಪುಲ್ ವೈರಲ್ ಆಗಿದೆ… ಮದುವೆಯ ಬಳಿಕ ಸಂಜೆ ವಧು – ವರರ ಮೆರವಣಿಗೆ ವೇಳೆ ಯುವಕರು ಕಾನೂನು ಸುವ್ಯವಸ್ಥೆಗೂ ಕ್ಯಾರೆ ಎನ್ನದೆ ಸಾರ್ವಜನಿಕವಾಗಿ ಕೈಯಲ್ಲಿ ಗನ್, ತಲ್ವಾರ್ ಹಿಡಿದು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು ಜನವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದೆ.ವಿಡಿಯೋ ಬಗ್ಗೆ ಜನವಾಡ ಪೊಲೀಸರು ಸಂಪೂರ್ಣವಾಗಿ ಮಾಹಿತಿ ಕಲೆ ಹಾಕುತ್ತಿದ್ದು ಮಾಹಿತಿ ಪಡೆದ ಬಳಿಕ ಡ್ಯಾನ್ಸ್ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲು ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group