ಇಂದು ಯುಗಾದಿ ಅಮಾವಾಸ್ಯೆ: ಅಮಾವಾಸ್ಯೆ ಪೂಜೆ ಹೇಗೆ ಮಾಡುವುದು ?

Must Read

🌸 ಸಂಸ್ಕೃತದಲ್ಲಿ, ಅಮಾ ಎಂದರೆ ಒಟ್ಟಿಗೆ ಮತ್ತು ವಾಸ್ಯ ಎಂದರೆ ಸಹಜೀವನ ನಡೆಸುವುದು ಎಂದು. ಅಮಾವಾಸ್ಯೆ (ಕುಹು) ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ. ಅಮಾವಾಸ್ಯೆಯ ದಿನ ಪೂಜೆ ಮಾಡಿ ಇಷ್ಟ ದೇವರ ಅನುಗ್ರಹವನ್ನು ಶೀಘ್ರವಾಗಿ ಪಡೆಯಬಹುದು.

🍀 ಅಮಾವಾಸ್ಯೆ ದಿನ ಈ ಕೆಲಸಗಳನ್ನು ತಪ್ಪದೇ ಮಾಡಿ 🍀

🌻 ಅಮಾವಾಸ್ಯೆ ದಿನ ಸಂಜೆ ಧನಲಕ್ಷ್ಮೀ ಪೂಜೆ ಮಾಡಿದರೆ ಒಳ್ಳೆಯದು. ಈ ಪೂಜೆಯನ್ನು ಸಾಯಂಕಾಲ ಮಾಡಬೇಕು. ದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ, ಬೆಳ್ಳಿ ವಿಗ್ರಹ / ಪ್ರತಿಮೆ ಇಟ್ಟುಕೊಳ್ಳಿ. ಇದರ ಜೊತೆಗೆ ನಿಮ್ಮ ಮನೆಯಲ್ಲಿರುವ ದುಡ್ಡು / ಕಾಸು / ನಾಣ್ಯಗಳು ಮತ್ತು ವಡವೆ / ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ. ಧನ ಸಂಪತ್ತು, ಧಾನ್ಯ, ಐಶ್ವರ್ಯ, ಧೈರ್ಯ, ಜ್ಞಾನ ಹೀಗೆ ಅಷ್ಟೈಶ್ವರ್ಯಗಳೂ ನಿಮ್ಮದಾಗುತ್ತದೆ.

🌻 ನಕಾರಾತ್ಮಕತೆಯಿಂದ ದೂರವಿರಲು ಹಾಗೂ ದೈವವನ್ನು ಒಲಿಸಿಕೊಳ್ಳಲು ಅವಾವಾಸ್ಯೆಯಂದು ಉಪವಾಸ ಮಾಡಿದರೆ ಶುಭ ಪ್ರಾಪ್ತಿಯಾಗುತ್ತದೆ.

🌻 ನೀವು ಸದಾ ಸರ್ವ ಸುಮಂಗಲಿಯಾಗಬೇಕೆಂದು ಬಯಸಿದರೆ ಈ ದಿನದಂದು ಅಶ್ವತ್ಥ ಪೂಜೆಯನ್ನು ಮಾಡಬೇಕು. ಅಶ್ವತ್ಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿವಾಗುತ್ತದೆ ಅಲ್ಲದೇ, ಪತಿಯ ಆಯುಷ್ಯ ಸಹ ಹೆಚ್ಚಾಗುತ್ತದೆ.

🌻 ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ನೆನೆದು ದಾನ, ತರ್ಪಣ ಬಿಟ್ಟರೆ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ. ನಿಧನರಾದ ಹಿರಿಯರಿಗೆ ಈ ದಿನದಂದು ಪೂಜೆ – ಪುನಸ್ಕಾರ ಸಲ್ಲಿಸಿದರೆ ಅವರ ಆಶೀರ್ವಾದ ಸಿಗಲಿದೆ.

🌻 ನೀವು ಸದಾ ಸರ್ವ ಸುಮಂಗಲಿಯಾಗಬೇಕೆಂದು ಬಯಸಿದರೆ ಈ ದಿನದಂದು ಅಶ್ವಥ ಪೂಜೆಯನ್ನು ಮಾಡಬೇಕು. ಅಶ್ವಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿವಾಗುತ್ತದೆ ಅಲ್ಲದೇ, ಪತಿಯ ಆಯುಷ್ಯ ಸಹ ಹೆಚ್ಚಾಗುತ್ತದೆ.

🌻 ಸಾಧ್ಯವಿದ್ದಷ್ಟು ಈ ದಿನಗಳಂದು ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಕುಲದೇವತೆ, ಇಷ್ಟದೇವತೆಯ ನಾಮಜಪನ್ನು ಹೆಚ್ಚು ಹೆಚ್ಚು ಮಾಡಿ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group