ಬೀದರ – ಜಿಲ್ಲಾ ಪಂಚಾಯತ ಬೀದರ್ ನ ಗ್ರಾಮೀಣ ಕುಡಿಯುವ ನೀರು ಯೋಜನೆ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದು ಒಬ್ಬ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.
ಜಿಲ್ಲಾ ಪಂಚಾಯತಿಯ ಅಸಿಸ್ಟೆಂಟ್ ಇಂಜಿನೀಯರ್ ನಾಗನಾಥ್ ಬಿರಾದಾರ ಎಂಬುವವರು ಜಲ ಜೀವನ್ ಮಿಷನ್ ಅಡಿಯಲ್ಲಿ ಫೈಲ್ ಮೂವ್ ಮೆಂಟ್ ಮಾಡಲು ರೂ. 30 ಸಾವಿರ ಹಣ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರ ಮಚ್ಚೆಂದ್ರರಡ್ಡಿ ಅವರಿಂದ ಲಂಚ ಪಡೆಯುವಾಗ ಜಿ ಪಂ ಎಇಇ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಎಸ್ಪಿ ಅಮರನಾಥ್ ರಡ್ಡಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಹಣಮಂತರಾಯ, ಪಿಐ ಶರಣಬಸಪ್ಪಾ ಕೋಡಲಾ, ವೆಂಕೆಟೇಶ್ ಎಡಹಳ್ಳಿ, ಹಾಗೂ ಸಿಬ್ಬಂದಿಗಳಾದ ಶ್ರೀಕಾಂತ್,ಕುಶಾಲ್, ಅನಿಲ್,ಕಿಶೋರ್ ಸೇರಿದಂತೆ ಹಲವು ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.
ಸದರಿ ಅಧಿಕಾರಿಯ ಮೇಲೆ ಅಕ್ರಮ ಹಣ ಗಳಿಕೆ ದೂರುಗಳ ಹಿನ್ನಲೆ ಈ ದಾಳಿ ನಡೆದಿದ್ದು ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ