ಬೆಳಗಾವಿ – ನ್ಯಾಯವಾದಿ ಲೇಖಕ ಸುನೀಲ ಸಾಣಿಕೊಪ್ಪ ಬರೆದ ”ಕೃಷಿ” ಮತ್ತು “ಕಬ್ಬು” ಎಂಬ ಎರಡು ಪುಸ್ತಕಗಳನ್ನು ಬೆಳಗಾವಿಯ ಸರ್ಕಾರಿ ನೌಕರರ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿ ಎ.ಎಸ್.ಪಾಚ್ಚಾಪುರೆ ಅವರು ಪುಸ್ತಕ ಬಿಡುಗಡೆ ಮಾಡಿದರು.
ಗೌರವ ಅತಿಥಿ ಸಿ.ಎಂ.ಜೋಶಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬೆಳಗಾವಿ, ಅತಿಥಿಗಳಾದ ಎ.ಆರ್.ಪಾಟೀಲ್ ಹಿತೈಷಿ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರು ಮತ್ತು ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷರು ಮತ್ತು ಶಿವನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕರು ಮತ್ತು ಸಮಾರಂಭದ ಅಧ್ಯಕ್ಷ ಸಿದಗೌಡ ಮೋದಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವಾರು ವಕೀಲರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬಿ.ಎಸ್.ಹಿರೇಮಠ ನ್ಯಾಯವಾದಿಗಳು ಸ್ವಾಗತ ಭಾಷಣ ಮಾಡಿದರು. ಬಿ.ಎಸ್.ಸುಲ್ತಾನಪುರಿ ನ್ಯಾಯವಾದಿಗಳು ಅತಿಥಿಗಳ ಪರಿಚಯ ಮಾಡಿದರು. ಎ.ಎಮ್.ಪೋತದಾರ ನ್ಯಾಯವಾದಿಗಳು ಪುಸ್ತಕ ಪರಿಚಯ ಮಾಡಿದರು. ಎಸ್.ಬಿ.ಪಾಟೀಲ ನ್ಯಾಯವಾದಿಗಳು ವಂದನಾರ್ಪನೆ ಮಾಡಿದರು. ಶ್ರೀಮತಿ ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.