ಶ್ರೀ ರಾಮನ ಎದುರೇ ಬೈದಾಡಿಕೊಂಡ ಪಾಟೀಲ ಸಹೋದರರು

Must Read

ಬೀದರ – ರಾಮಾಯಣದಲ್ಲಿ ಶ್ರೀರಾಮ ಹಾಗೂ ಲಕ್ಷ್ಮಣ, ಶ್ರೀ ರಾಮ ಹಾಗೂ ಭರತರ ಸಹೋದರ ಪ್ರೇಮವನ್ನು ನೋಡುತ್ತೇವೆ. ಆದರೆ ಶ್ರೀರಾಮ ನವಮಿಯಂದು ರಾಮನ ಎದುರಲ್ಲೇ ಸಹೋದರರಿಬ್ಬರು ಅವಾಚ್ಯ ಶಬ್ದಗಳಿಂದ ಜಗಳಾಡಿಕೊಂಡ ಘಟನೆ ಬೀದರನಲ್ಲಿ ನಡೆದಿದೆ.

ಗಡಿ ಜಿಲ್ಲೆಯ ಬೀದರ್ ನಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಪಾಟೀಲ ಕುಟುಂಬದಲ್ಲಿ ಭಾರೀ ಗಲಾಟೆ ನಡೆದಿದ್ದು ತಮ್ಮನಾದ ಸಿದ್ದು ಪಾಟೀಲ ಮೇಲೆ ಅತ್ಯಂತ ಕೆಟ್ಟ ಪದವನ್ನು ಬಳಸಿದ ಅಣ್ಣ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಸಾವಿರಾರು ಜನರ ಎದುರೇ ಬೈದಾಡಿಕೊಂಡರು.

ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ ರಾಮನವಮಿ ನಿಮಿತ್ತ ಮೆರವಣಿಗೆಯಲ್ಲಿ ಶಾಸಕ ರಾಜಶೇಖರ ಪಾಟೀಲ್ ಮತ್ತು ಅವರ ಸಹೋದರ ಸಿದ್ದು ಪಾಟೀಲ್ ಮಧ್ಯೆ ತೀವ್ರ ವಾಗ್ವಾದ ನಡೆದು ಭಾರೀ ಗಲಾಟೆಯತ್ತ ಹೊರಟಿತು. ಇಬ್ಬರನ್ನೂ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಪರಸ್ಪರ ಅವಾಚ್ಯ ಶಬ್ದಗಳಿಂದ ಬಹಿರಂಗವಾಗಿಯೇ ನಾಯಕರು ಬೈದಾಡಿಕೊಂಡರು ಅವರ ಬೆಂಬಲಿಗರಲ್ಲಿ ಕೆಲವರು ಮೋದಿ ಮೋದಿ ಎಂದು ಕೂಗಿದರೆ ಕೆಲವರು ರಾಜಾ ಹುಲಿ ರಾಜಾಹುಲಿ ಎನ್ನುತ್ತ ಜಗಳಕ್ಕೆ ತುಪ್ಪ ಸುರಿಯುತ್ತಿದ್ದರು.

ಈ ಅಣ್ಣ ತಮ್ಮಂದಿರ ಜಗಳ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಶ್ರೀ ರಾಮನವಮಿಯ ಉತ್ಸವದ ಮೇಲೆ ಕರಿ ಛಾಯೆ ಮೂಡುವಂತಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group