ವ್ಹಿ. ಪಿ. ಜೇವೂರ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ

Must Read

ಮುನವಳ್ಳಿ: ಪಟ್ಟಣದ ಶ್ರೀ ವ್ಹಿ. ಪಿ. ಜೇವೂರ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಉಮೇಶ ಬಾಳಿ ಮಾತನಾಡಿ, “ಸಾಮರಸ್ಯ ಬದುಕು ಕಟ್ಟಿ ಕೊಡುವ ಸಂವಿಧಾನ ಎಲ್ಲರಿಗೂ ಒಂದೇ ಕಾನೂನು ರಚಿಸಿ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿ ಕಂದಕ, ಅಸಮಾನತೆ ತೊಲಗಿಸಲು ಸಾಕಷ್ಟು ಶ್ರಮಿಸಿದ ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಆದರ್ಶವಾಗಬೇಕು” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ರಾಜ್ಯೋತ್ಸವ ಪ್ರಶಸ್ತಿ ಗೌರವ ಪಡೆದ ಶಿಕ್ಷಕ ಬಿ. ಬಿ. ಹುಲಿಗೊಪ್ಪ ಅವರನ್ನು ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಅನುರಾಧಾ ಬೆಟಗೇರಿ ಹಾಗೂ ಸದಸ್ಯರುಗಳಾದ, ಶ್ರೀಮತಿ ಸವಿತಾ ಹಂಜಿ, ಶ್ರೀಮತಿ ಸುಮಾ ಯಲಿಗಾರ, ಶ್ರೀಮತಿ ಭಾಗ್ಯ ಅಮಟೆ, ಶ್ರೀಮತಿ ಗೌರಿ ಜಾವೂರ, ಶ್ರೀಮತಿ ಪ್ರೀತಿ ಕರೀಕಟ್ಟಿ, ಶ್ರೀಮತಿ ಸುಜಾತಾ ಕೋರಿ, ಶ್ರೀಮತಿ ರಾಧಾ ಕುಲಕರ್ಣಿ ಯವರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಬಿ. ಹುಲಿಗೊಪ್ಪ ಗುರುಗಳು, ” ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬದುಕಿನ ಆದರ್ಶಗಳನ್ನು ನಾವು ಅಳವಡಿಸಿ ಕೊಳ್ಳುವ ಜೊತೆಗೆ ನಮಗೆ ಅವರು ಹಾಕಿಕೊಟ್ಟ ಸರ್ವರಿಗೂ ಸಮಬಾಳು ಸಮಪಾಲು ತತ್ವ ಅಳವಡಿಸಿಕೊಳ್ಳುವ ಮೂಲಕ ಬದುಕಿನ ಸಾರ್ಥಕತೆ ಮೆರೆಯಬೇಕು ಎಂದು ನುಡಿದರು.

ಕಾರ್ಯ ಕ್ರಮ ದಲ್ಲಿ ಉಮೇಶ ಬಾಳಿ, ಅಶೋಕ ಪಟ್ಟಣಶೆಟ್ಟಿ, ಅನಿಲ್ ಕಿತ್ತೂರು, ಸಂತೋಷ ಹಂಜಿ, ಬಾಳು ಹೊಸಮನಿ ಸಂಸ್ಥೆಯ ಅಧ್ಯಕ್ಷರಾದ ಪಂಚಪ್ಪ ಯ.ಜಂಬಗಿ, ಕಾರ್ಯದರ್ಶಿಗಳಾದ ಬಸಪ್ಪ ಮಾದರ, ಶಿವು ಕಾಟಿ, ಶೇಷಗಿರಿ ಜೋಶಿ, ಶಿಕ್ಷಕರಾದ ಲಾಲ್ ಸಾಬ್ ವಟ್ನಾಳ, ಅಜಯ್ ಕಂಬನವರ, ಮಂಜು ಮಾವಿನಕಟ್ಟಿ, ವೀರು ಕಳಸನ್ನವರ, ಸುಜಾತ ಬಡ್ಲಿ, ಅಮಿನಾ ತಾಸೇದ, ಇಬ್ರಾಹಿಂ ಅತಾರ, ಪವನ್ ಜಂಬಗಿ ಮೊದಲಾದವರು ಉಪಸ್ಥಿತರಿದ್ದರು. ಶಿವೂ ಕಾಟೆ ನಿರೂಪಿಸಿದರು.ವೀರಣ್ಣ ಕೊಳಕಿ ಸ್ವಾಗತಿಸುವ ಜೊತೆಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೇಷಗಿರಿ ಜೋಶಿ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group