ಕಾರ್ಖಾನೆಯ ತ್ಯಾಜ್ಯದ ನೀರು ಸೇವಿಸಿ ಹಂದಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಸಚಿವರ ತವರೂರಿನಲ್ಲಿ ಮೊಟ್ಟಮೊದಲ ಬಾರಿಗೆ ಹಂದಿಯ ಶವಪರೀಕ್ಷೆ ನಡೆಸಲಾಯಿತು.
ಖಾಸಗಿ ಕಂಪನಿಯ ದಿನನಿತ್ಯದ ತ್ಯಾಜ್ಯ ಕೆಮಿಕಲ್ ರೈತರ ಹೊಲ ಕ್ಕೆ ಮತ್ತು ಚರಂಡಿ ಒಳಗೆ ಬಿಡುವ ಕಾರಣ ನಮ್ಮ ಹಂದಿ ಆ ನೀರು ಕುಡಿದು ಸತ್ತಿದ್ದು ಈ ಬಗ್ಗೆ ತನಿಖೆ ನಡೆಸಬೇಕು. ಹಂದಿಯ ಶವ ಪರೀಕ್ಷೆ ಮಾಡಬೇಕು ಎಂದು ಹಂದಿಯ ಮಾಲೀಕ ಆಗ್ರಹಿಸಿದರ ಹಿನ್ನೆಲೆಯಲ್ಲಿ ಹಂದಿಗೆ ಶವಪರೀಕ್ಷೆ ಮಾಡುವುದಕ್ಕೆ ಪಶುಸಂಗೋಪನೆ ಇಲಾಖೆ ಮುಂದಾಗಿದ್ದು ಡಾ. ಖಾಲಿದಬಫ್ಸರ್ ಹಾಗೂ ಗೋವಿಂದ ರಾವ್ ಶವಪರೀಕ್ಷೆ ಮಾಡಿದರು.
ಬೀದರ್ ಜಿಲ್ಲೆ ಹುಮನಾಬಾದ ಪಟ್ಟಣದಲ್ಲಿ ನಡೆದ ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಸ್ಥಳೀಯ ಶಾಸಕರು ಖಾಸಗಿ ಕಂಪನಿಯ ವಿರುದ್ಧ ಯಾಕೆ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ? ಈ ಮೂಕ ಪ್ರಾಣಿಗಳ ಸಾವಿಗೆ ಯಾರು ಕಾರಣ ಎಂಬುದು ಹುಮನಬಾದ ಕ್ಷೇತ್ರದ ಸಾರ್ವಜನಿಕರ ಪ್ರಶ್ನೆ ಆಗಿದೆ.
ಅಲ್ಲದೆ ಜಿಲ್ಲೆಯಲ್ಲಿ ಒಂದೇ ಕುಟುಂಬದಲ್ಲಿ ಮೂವರು ನಾಯಕರು ಇದ್ದಾರೆ ಒಬ್ಬರು ವಿಧಾನ ಸಭಾ ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು ಇದ್ದರೂ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಯೋಜನಗಳಾಗದೆ ಕೇವಲ ಹಾನಿ ಮಾತ್ರ ಸಂಭವಿಸುತ್ತಿದ್ದು ಅಭಿವೃದ್ಧಿ ಕೆಲಸಗಳಂತೂ ನಿಂತೇ ಹೋದಂತೆ ಆಗಿದೆ.
ಚುನಾವಣೆ ಬಂದಾಗ ಒಂದಾಗಿ ಬರುವ ರಾಜಕೀಯ ನಾಯಕರು ಆಯ್ಕೆಯಾದ ಮೇಲೆ ಸಾರ್ವಜನಿಕ ರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾದರೆ ಬಡ ಜನರು ಏನು ಮಾಡಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ ಇದಕ್ಕೆ ಈ ನಾಯಕರು ಯಾವರೀತಿಯ ಉತ್ತರ ಕೊಡುತ್ತಾರೆಂಬುದನ್ನು ಕಾಲವೇ ಹೇಳಬೇಕು.
ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ