ಬೀದರ – ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ಜಲಧಾರೆ ಯಾತ್ರಾ ರಥವು ಬೀದರ ನಗರ ಪ್ರವೇಶ ಮಾಡಿತು.
ಪಟಾಕಿ ಸಿಡಿಸಿ ಯಾತ್ರಾ ರಥವನ್ನು ನಗರಕ್ಕೆ ಸ್ವಾಗತ ಮಾಡಿದ ಜೆಡಿಎಸ್ ಕಾರ್ಯಕರ್ತರು. ನಗರದ ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಇಂದು ಜನತಾ ಜಲಧಾರೆ ಯಾತ್ರೆ ಸಂಚಾರ ಮಾಡಿತು.
ಈ ಮುಂಚೆ ಐತಿಹಾಸಿಕ ನರಸಿಂಹ ಝರ್ನಾ ದೇವಸ್ಥಾನದಲ್ಲಿ ಯಾತ್ರಾ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೀದರ್ ನಗರದಲ್ಲಿ ಸಂಚಾರ ಮಾಡಿ ನಾಳೆ ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ಜನತಾ ಜಲಧಾರೆ ಯಾತ್ರಾ ಬೃಹತ್ ಸಮಾವೇಶದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರ್ ಸ್ವಾಮಿ ಭಾಗಿಯಾಗಲಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ