25 ಜೋಡಿಗಳ ಉಚಿತ ಸಾಮೂಹಿಕ ವಿವಾಹ

Must Read

ಸಿಂದಗಿ; ಮಾತೋಶ್ರೀ ನಂದಾ ಮನೋಹರ ಹಂಚಿನಾಳ ಪೌಂಡೇಶನ್ ವತಿಯಿಂದ ಮೇ 26 ರಂದು 25 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ವಿನೋದ ಹಂಚಿನಾಳ ತಿಳಿಸಿದರು.

ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿ. ಮನೋಹರ ಹಾಗೂ ದಿ. ನಂದಾ ಮನೋಹರ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧು, ವರರಿಗೆ ಬಟ್ಟೆ ಜೊತೆಗೆ ವಧುವಿಗೆ ತಾಳಿ, ಕಾಲುಂಗುರಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ವಧು-ವರರಿಗೆ ಕ್ರಮವಾಗಿ 21 ವರ್ಷ ಹಾಗೂ ವಧುವಿಗೆ 18 ವರ್ಷ ತುಂಬಿರಬೇಕು. ಕುಟುಂಬದ ಪಾಲಕರ ಒಪ್ಪಿಗೆ ಪತ್ರ, ವಯಸ್ಸಿನ ದಾಖಲೆ ಜತೆಗೆ ಅಗತ್ಯ ಶಾಲಾ ದಾಖಲೆ ಸಲ್ಲಿಸಬೇಕು ಎಂದು ತಿಳಿಸಿದರು.

ಏ.25 ರಿಂದ ಮೇ7ರ ಒಳಗೆ ಹೆಸರನ್ನು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9945072221, 9686711170 ಹಾಗೂ 9902657028 ಗೆ ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಮೂರು ಝಾವದ ಮಠದ ವೀರೇಶ ಸ್ವಾಮಿಗಳು, ಪ್ರಭು ಹಂಚಿನಾಳ, ಶಿಕ್ಷಕ ಸಂಗಮೇಶ ಮಲ್ಲೇದ, ಗುರು ಪತ್ತಾರ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group