ಅಂಬೇಡ್ಕರ ಸ್ಮಾರಕಕ್ಕೆ ರೂ. ಹತ್ತುಕೋಟಿ ಬಿಡುಗಡೆಗೆ ಆರ್.ಎಂ.ಚೌರ ಆಗ್ರಹ

Must Read

ಸಿಂದಗಿ; ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಸ್ಮಾರಕಕ್ಕಾಗಿ 10ಎಕರೆ ಭೂಮಿ ಮಂಜೂರು ಮಾಡಿ ರೂ. 10 ಕೋಟಿ ಸ್ಮಾರಕ ನಿರ್ಮಾಣಕ್ಕಾಗಿ ಕೂಡಲೇ ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಆಗ್ರಹಿಸಿ ತಾಲೂಕು ಅಡಳಿತದ ಶಿರಸ್ತೇದಾರ ಎಸ್.ಎಸ್.ಮ್ಯಾಗೇರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಡಾ||ಬಿ.ಆರ್.ಅಂಬೇಡ್ಕರ್ ಸ್ಮಾರಕ ವಸ್ತು ಸಂಗ್ರಹಾಲಯ, ಸಂಶೋಧನ ಕೇಂದ್ರಗಳ ನಿರ್ಮಾಣ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಶೇಖರ ಎಂ. ಚೌರ ಮಾತನಾಡಿ, ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳಗಳನ್ನು ಸ್ಮಾರಕ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದು ಅದರಂತೆ ಡಾ.ಬಾಬಾಸಾಹೇಬರು ಗುಮ್ಮಟ ನಗರಿ ವಿಜಯಪುರ ಜಿಲ್ಲೆ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ಇತಿಹಾಸವಿದೆ. ಆ ಕಾರಣಕ್ಕೆ ಬಜೆಟ್‍ನಲ್ಲಿ ಸ್ಮಾರಕಕ್ಕಾಗಿ 10ಎಕರೆ ಭೂಮಿ ಮಂಜೂರು ಮಾಡಿ ರೂ. 10 ಕೋಟಿ ಸ್ಮಾರಕ ನಿರ್ಮಾಣಕ್ಕಾಗಿ ಕೂಡಲೇ ಮಂಜೂರು ಮಾಡಿ ಆದೇಶ ಹೊರಡಿಸಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿ.ವಾಯ್.ಭಾಣಿ, ಪಿ.ಎಮ್.ಕಂಬಾರ, ರವಿ ಹಾಲಹಳ್ಳಿ, ಆರ್.ಎಸ್.ಹೊಸಮನಿ, ಅಕ್ಷಯ ದಂಗಾಪೂರ, ಸಾಯಬಣ್ಣ ದೊಡಮನಿ ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group