Homeಸಿನಿಮಾ"ನಿನ್ನ ನೆನಪಿನಲಿ " ಚಿತ್ರೀಕರಣ ಮುಕ್ತಾಯ

“ನಿನ್ನ ನೆನಪಿನಲಿ ” ಚಿತ್ರೀಕರಣ ಮುಕ್ತಾಯ

ಹುಬ್ಬಳ್ಳಿ : ಬೆಳದಿಂಗಳು ಸಿನಿ ಕಂಬೈನ್ಸ್ ಹುಬ್ಬಳ್ಳಿ ಅವರು ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರ ‘ನಿನ್ನ ನೆನಪಿನಲಿ’ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದೆ.

ಚಿತ್ರವು 45 ದಿನಗಳವರೆಗೆ ಎರಡು ಹಂತದಲ್ಲಿ ಬ್ಯಾಡಗಿ, ಕಾಗಿನೆಲೆ, ಹಾವೇರಿ ಜಿಲ್ಲೆ ಯ ಸುತ್ತ- ಮುತ್ತ ಚಿತ್ರೀಕರಿಸಲಾಗಿದೆ. ಹಾಡಿನ ಚಿತ್ರೀಕರಣ ವನ್ನು ಮುಂಡಗೋಡ ಸುತ್ತಮುತ್ತಲಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನೈಜ ಪ್ರೇಮ ಕಥೆ ಹೊಂದಿರುವ ಚಿತ್ರ ಸುಂದರವಾಗಿ ಮೂಡಿಬಂದಿದೆ.

ಅಲ್ಲದೆ ಉತ್ತರ ಕರ್ನಾಟಕದ ಪ್ರಸಿದ್ಧ ಗ್ರಾಮೀಣ ಹಬ್ಬ ‘ಹೋರಿ’ ಹಬ್ಬವನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದೆ ಎಂದು ಚಿತ್ರ ನಿರ್ದೇಶಕ ದೇವರಾಜ್ ಎನ್ ಹುಡೇದ ಹೇಳಿದ್ದಾರೆ. ಇದು ದೇವರಾಜ್ ರ ನಿರ್ದೇಶನದ ಮೂರನೇ ಚಿತ್ರವಾಗಿದೆ. ಪಾತ್ರವರ್ಗದಲ್ಲಿ ಹುಬ್ಬಳ್ಳಿಯ ಸತೀಶ ಕೃಷ್ಣಮೂರ್ತಿ ನಾಯಕ ನಟರಾಗಿ ಅಭಿನಯಿಸುತ್ತಿದ್ದು, ನಾಯಕಿಯರಾಗಿ ಬೆಳಗಾವಿಯ ಜ್ಯೋತಿ ಪತ್ತಾರ, ಬೆಂಗಳೂರಿನ ವಿನುತಾ, ಪೋಷಕ ಪಾತ್ರದಲ್ಲಿ ಚಲನಚಿತ್ರ ಹಾಗೂ ಧಾರಾವಾಹಿಯ ಕಲಾವಿದರು ಮಾಲತಿ ಮೈಸೂರು, ಸುನಂದಮ್ಮ ಹೊಸಪೇಟೆ ,ವಿಲನ್ ಶಿವಣ್ಣ,ಸಮರ್ಥ,ಶಿವಣ್ಣ,ಕಾಸಿ,ವಿಠ್ಠಲ ಗಸ್ತಿ,ಶಿವಬಸವ ಬಣಕಾರ,ಶಶಿಕಲಾ ಅಕ್ಕಿ, ಶ್ರೀರಾಮ್ ಶೇಡಂ, ಕನ್ನಡ ಕೋಗಿಲೆ ಖ್ಯಾತಿಯ ಮಹಾನ್ಯ ಪಾಟೀಲ,ಸ್ಟೇಫಿ ಹುಬ್ಬಳ್ಳಿ ಜೊತೆಗೆ ಉತ್ತರ ಕರ್ನಾಟಕದ ಕಲಾವಿದರು ಅಭಿನಯಿಸಿದ್ದಾರೆ. ಒಟ್ಟು ಚಿತ್ರದಲ್ಲಿ ಆರು ಹಾಡುಗಳಿದ್ದು, ಖ್ಯಾತ ಚಲನಚಿತ್ರ ಗಾಯಕರಾದ ಅನುರಾಧ ಭಟ್, ಶಮಿತ ಮಲ್ನಾಡ್, ರಾಜೇಶ್ ಕೃಷ್ಣನ್, ಕಾಶೀಮ್, ಮೆಹಬೂಬ ಸಾಬ್, ಹಾಗೂ ಶಿವಬಸವ ಬಣಕಾರ ಹಾಡಿದ್ದಾರೆ. ಛಾಯಾಗ್ರಹಣ – ರಣಧೀರ ನಾಯಕ,ರಾಘು ರೂಗಿ, ಸಂಕಲನ – ಶಿವಶರಣ ಸುಗ್ನಳ್ಳಿ. ಸಂಗೀತ – ಮುನ್ನಾ ಚಿತ್ರದುರ್ಗ , ಪತ್ರಿಕಾ ಸಂಪರ್ಕ -ಡಾ. ಪ್ರಭು ಗಂಜಿಹಾಳ ,ಡಾ. ವೀರೇಶ ಹಂಡಗಿ ,ಕಥೆ -ಚಿತ್ರಕಥೆ -ಸಾಹಿತ್ಯ -ಸಂಭಾಷಣೆ -ನಿರ್ದೇಶನ -ದೇವರಾಜ್ ಎನ್ ಹುಡೇದ ಅವರದಿದೆ. ವಿನೋದಕುಮಾರ ಗುಂಜಳ ನಿರ್ಮಾಪಕರಾಗಿದ್ದು, ಬಾಲಚಂದ್ರ ಗೌಡ ಪಾಟೀಲ್ ರ ಸಹಕಾರ ವಿದೆ, ಈ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವದಾಗಿ ನಿರ್ದೇಶಕ ಹುಡೇದ ಹೇಳುತ್ತಾರೆ.

-ಡಾ.ಪ್ರಭು. ಗಂಜಿಹಾಳ-9448775346

RELATED ARTICLES

Most Popular

error: Content is protected !!
Join WhatsApp Group