Homeಸುದ್ದಿಗಳುಶರಣ ಸಾಹಿತ್ಯ ಪರಿಷತ್ತು  ಹಾಗೂ ವಚನೋತ್ಸವ ಸಮಿತಿಯಿಂದ ವಚನೋತ್ಸವ

ಶರಣ ಸಾಹಿತ್ಯ ಪರಿಷತ್ತು  ಹಾಗೂ ವಚನೋತ್ಸವ ಸಮಿತಿಯಿಂದ ವಚನೋತ್ಸವ

ಸಿಂದಗಿ: ಶುದ್ಧ  ಮನಸ್ಸಿನಿಂದ ಬುದುಕು ಕಟ್ಟಿ ಕೊಂಡು ಶರಣರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಅವರು ತೋರಿರುವ ಭಕ್ತಿ ಮಾರ್ಗದಲ್ಲಿ  ನಡೆದಾಗ ನಮ್ಮ ಜೀವನ  ಸಮೃದ್ಧಿಯಾಗುತ್ತದೆ ಎಂದು ವಿಶ್ರಾಂತ ಉಪನ್ಯಾಸಕ ಹಾಗೂ ಜಾನಪದ  ಹಿರಿಯ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.

ಪಟ್ಟಣದ  ಮಲ್ಲಿಕಾರ್ಜುನ ನಗರದ   ಶ್ರೀ ವಜ್ರ ಹನುಮಾನ ಮಂದಿರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು  ಹಾಗೂ ವಚನೋತ್ಸವ ಸಮಿತಿ ಹಮ್ಮಿಕೊಂಡಿರುವ  136 ನೇ ವಚನೋತ್ಸವದ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿ, ಜಾತಿ ಪದ್ದತಿ ಹಾಗೂ ಅನಿಷ್ಠ ಪದ್ದತಿಗೆ ತಿಲಾಂಜಲಿ ಹೇಳುವ ಮೂಲಕ ಶರಣರ ವಚನಗಳನ್ನು ಓದಬೇಕು ಶರಣರ ಅನುಭಾವಗಳನ್ನು ಜೀವನದಲ್ಲಿ ರೂಡಿಸಿ ಕೊಂಡು ಉತ್ತಮ ಸಂಸ್ಕಾರದಲ್ಲಿ  ಬೆಳೆಯುವ ಮೂಲಕ ಮನುಷ್ಯ ಸತ್ಯದ ಹಾದಿಯಲ್ಲಿ ನಡೆಯ ಬೇಕು ಮನಸ್ಸಿನಲ್ಲಿರುವ ಕೊಳೆ ಕಳೆದು ಕೊಂಡಾಗ ನಮ್ಮ ಜೀವನದಲ್ಲಿ ಯಾವಾಗಲು ಸಮೃದ್ಧಿ ಸಮಾಧಾನ ಶಾಂತಿ ದೊರೆಯುತ್ತದೆ .ಶರಣರ ವಚನಗಳು ಮಾತೃ ಭಾಷೆಯಲ್ಲಿ ರಚನೆಯಾಗಿವೆ ಅವನ್ನು ಪ್ರತಿ ದಿನವು ಓದುವ ಅಭಿರುಚಿ  ಬೆಳೆಸಿ ಕೊಳಬೇಕು. ಕನ್ನಡ ನೆಲದಲ್ಲಿ ಅಣ್ಣ ಬಸವಣ್ಣನವರು  ಜನ್ಮ ತಾಳಿದ್ದಾರೆ ಅವರ ವಚನಗಳು ಜನಮನ ಗಳಿಸಿವೆ ಮತ್ತು ವಚನಗಳ ಸಾರಾಂಶ  ಜಾತಿ ಪದ್ದತಿ ರಹಿತವಾಗಿವೆ ಅವರ ವಚನಗಳನ್ನು ಓದುವದರಿಂದ,, ಆಲಿಸುವದರಿಂದ ನಮ್ಮ ಜೀವನ ಪಾವನವಾಗುತ್ತದೆ  ಎಂದರು.

ಶರಣೆ ಸಾವಿತ್ರಿ ಮೋದಿ ಮಾತನಾಡಿ, ಸಮಾಜದಲ್ಲಿ ಜಾತಿ ಪದ್ದತಿ ಹೋಗಲಾಡಿಸಲು ಶರಣರ  ವಚನಗಳನ್ನು ಪ್ರತಿ ದಿನವು ಮನದಲ್ಲಿ ಪಠಣ ಮಾಡುವ ಮೂಲಕ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು  ಹಿರಿಯರನ್ನು ಪೂಜ್ಯ ಮನೋಭಾವನೆಯಿಂದ ಅವರನ್ನು ಗೌರವದಿಂದ ಕಾಣುವ ಮೂಲಕ ಕುಟುಂಬದಲ್ಲಿ ಹೊಂದಾಣಿಕೆ ಹಾಗೂ ಸರಳವಾಗಿ  ಇರುವ ಮುಖಾಂತರವಾಗಿ  ಆರೋಗ್ಯವಂತ ಜೀವನ ನಡೆಸಬೇಕು ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚನ್ನಪ್ಪ ಕತ್ತಿ ಮಾತನಾಡಿ,  ಶರಣರ ವಚನಗಳು ಸಾಮಾಜಿಕವಾಗಿ ಶ್ರೀಮಂತವಾಗಿವೆ  ವಚನೋತ್ಸವ ಸಮಿತಿ ಪ್ರಕಟಿಸಿದ  ವಚನೋತ್ಸವ  ಪುಸ್ತಕವು ತಮ್ಮ ಮನೆಗೆ ಬಂದವರಿಗೆ ಪುಸ್ತಕವು ಕಾಣುವ ರೂಪದಲ್ಲಿ  ಇಡಬೇಕು ಅವರು ಆ ಪುಸ್ತಕ ತಗೆದು ಕೊಂಡು  ವಚನಗಳು ಓದಲು ಪ್ರೇರಣೆ ನೀಡಬೇಕು ವಚನ ಓದುವದರಿಂದ  ಜೀವನ ಪಾವನವಾಗುತ್ತದೆ  ಎಂದು ಹೇಳಿದರು.

ಶಿಕ್ಷಕ ಸಾಹಿತಿ  ಬಸವರಾಜ ಅಗಸರ, ವಿಶ್ರಾಂತ ಶಿಕ್ಷಕ ಸಾಹಿತಿ ಶಿವಕುಮಾರ ಶಿವಶಿಂಪಿ. ಶಿಕ್ಷಕ ಶಂಕರ ಕಟ್ಟಿಮನಿ. ಹಿರಿಯ ಜೀವಿ ಶಿವಪ್ಪ ಗವಸಾನೆ. ಶರಣಗೌಡ ಪಾಟೀಲ. ಮಹಾಂತೇಶ ಶೆಟ್ಟಿ. ಬಸವರಾಜ ಹನಮಶೆಟ್ಟಿ. ವಿರೇಶ ಇವಣಿ. ದುಂಡಪ್ಪ ಲೋಣಿ. ಸುಭದ್ರಾ ತಾರಾಪೂರ. ಕಲ್ಲಪ್ಪ ತಾರಾಪೂರ. ಸರಸ್ವತಿ ಬಿಜಾಪೂರ. ಭಾರತಿ ಅಗಸರ. ಪುಷ್ಪ ತುಪ್ಪದ. ಸವಿತಾ ಸಿಂದಗಿ. ಭಾಗ್ಯಶ್ರೀ ಪಡಗಾನೂರ.  ಬಸವಣ್ಣನವರ ವಚನವನ್ನು ಪಠಣ ಮಾಡಿದರು.

ಸಂತೋಷಕುಮಾರ ನಂದಿಕೋಲ ಸ್ವಾಗತಿಸಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group