ಬಡತನ ನೋವು ಹಸಿವು ನಿರಾಸೆ ದುಃಖ ಒಳಗೊಂಡ ಬದುಕಿನಲ್ಲಿ ಕಾವ್ಯ ಅರಳುತ್ತದೆ ಎಂದು ಯಾರೂ ಊಹಿಸಲು ಸಾಧ್ಯ?
ಇಂತಹ ಒಂದು ಸಾದರ ರೂಪದ ವ್ಯಕ್ತಿತ್ವ ಶ್ರೇಷ್ಟ ಕವಿ ಈಶ್ವರ ಸಣಕಲ್ಲ.
ಈಶ್ವರ ಸಣಕಲ್ಲ ಇವರು ೧೯೦೬ ಡಿಸೆಂಬರ ೨೦ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡದಲ್ಲಿ ಜನಿಸಿದರು. ತಾಯಿ ನೀಲಾಂಬಿಕೆ ; ತಂದೆ ಮಹಾರುದ್ರಪ್ಪ. ಬಾಲ್ಯದಲ್ಲೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಅನುಭವಕ್ಕೆ ಅಭಿವ್ಯಕ್ತಿಯ ರೂಪುಕೊಟ್ಟರು. ಅಧ್ಯಾಪಕರಾಗಿ, ವಚನ ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸುಮಾರು ೨೦ ಕೃತಿಗಳನ್ನು ರಚಿಸಿದ್ದಾರೆ. ಮುಂಬಯಿಯಿಂದ ಹೊರಡುತ್ತಿದ್ದ “ಸಹಕಾರ” ಪತ್ರಿಕೆಯ ಸಂಪಾದಕರಾಗಿದ್ದರು.
ಇವರ ಕೆಲವು ಕೃತಿಗಳು:
- ಕೋರಿಕೆ (ಕವನ ಸಂಕಲನ)
- ಹುಲ್ಕಲ್ಗೆಕಿಡಿ(ಕವನ ಸಂಕಲನ)
- ಬಟ್ಟೆ (ಕಥಾ ಸಂಕಲನ)
- ಸಂಸಾರ ಸಮರ (ಕಾದಂಬರಿ)
- ಗ್ರಾಮೋದ್ದಾರ (ಅನುವಾದಿತ ಕೃತಿ) ಗರಗ ಮಡಿವಾಳ ಶ್ರೀಗಳ
ಚರಿತ್ರೆ ಶ್ರೇಷ್ಟ ಕೃತಿ. ಬೆಳಗಾವಿ ಹುಬ್ಬಳ್ಳಿ ಗರಗ ಹೀಗೆ ಅಲೆಮಾರಿ ಜೀವನ. ತುಂಬು ಸಂಸಾರವಿದ್ದರೂ ವೈರಾಗಿ ಬದುಕು. ಕನ್ನಡದ ಚಂದಸ್ಸು ಅವರ ಮಹಾ ಕಾವ್ಯ ರಚನಾ ಆಸಕ್ತಿ ಕವಿ ಕುವೆಂಪು ಅವರನ್ನೂ ಬೆರಗುಗೊಳಿಸಿತ್ತು. ವಿರಕ್ತಿ ಜೀವನ ಶೈಲಿ ಸರಳ ಬದುಕು.
ದೊತರ ನೀಲಿ ಕೋಟು ಮೇಲೆ ಟೊಪ್ಪಿಗೆ ಇವರನ್ನು ನಾನು ೧೯೭೮ ರಿಂದ ೧೯೮೪ ವರೆಗೆ ಸಂಪರ್ಕ ಹೊಂದಿದ್ದೆನು.
ಶ್ರೇಷ್ಟ ಮಾನವೀಯ ಮೌಲ್ಯ ಹೊಂದಿದ್ದ ಕವಿ.
ಇವರ ಬಟ್ಟೆ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಇವರು ೧೯೮೦ ರಲ್ಲಿ ಬೆಳಗಾವಿಯಲ್ಲಿ ನಡೆದ ೫೨ ನೆಯ ಅಖಿಲ ಭಾರತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದರು.
ಈಶ್ವರ ಸಣಕಲ್ಲರ ಉದಾತ್ತ ಆದರ್ಶವು ಅವರ ಕವನವೊಂದರಲ್ಲಿ ಬರುವ ಈ ಸಾಲುಗಳಿಂದ ವ್ಯಕ್ತವಾಗುತ್ತದೆ: ಜಗವೆಲ್ಲ ನಗುತಿರುಲಿ ಜಗದಳವು ನನಗಿರಲಿ ಈಶ್ವರ ಸಣಕಲ್ಲರು ೧೯೮೪ ಡಿಸೆಂಬರ ೩ರಂದು ತೀರಿಕೊಂಡರು.ಉತ್ತರ ಪ್ರದೇಶದ ನಿರಾಲಾ ಕವಿಯನ್ನು ನೆನಪಿಸುವ ಕವಿ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ