ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಹಿಂದು ಮುಸ್ಲಿಮ್ ಸಮುದಾಯದ ಭಾವೈಕ್ಯ ಸಂಗಮವಾದ ಮನ್ನಾ ಏಖೇಳಿಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಯೂಸುಫ್ ಆಲಿ ಜಮಾದಾರ ಅವರ ಇಪ್ತಿಯಾರ್ ಕೂಟದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡರು.
ಮುಸ್ಲಿಂ ಸಮುದಾಯದ ಜನರು ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವವರೆಗೆ ಬೀದರ ಜಿಲ್ಲೆಯ ಮನ್ನಾ ಏ ಖೇಳಿ ಗ್ರಾಮದ ಮಾಜಿ ಅಧ್ಯಕ್ಷರ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಯೂಸುಫ್ ಆಲಿ ಜಮಾದಾರ ಅವರು ಏರ್ಪಡಿಸಿದ ಇಪ್ತಿಯಾರ ಕೂಟ ದಲ್ಲಿ ಜಾತಿ ಧರ್ಮ ವನ್ನು ಮರೆತು ಭಾಗವಹಿಸುವ ಮೂಲಕ ಸೌಹಾರ್ದ ಸಾರಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಅಮೃತ ರಾವ್ ಚಿಮ್ಮಕೊಡೆ, ಮಾಜಿ ಮುಖ್ಯ ಮಂತ್ರಿ ಧರಮ್ ಸಿಂಗ್ ಅವರ ಅಳಿಯ ಚಂದ್ರ ಸಿಂಗ್ ,ಹುಮನಾಬಾದ ತಾಲೂಕ ಪಂಚಾಯತನ ಮಾಜಿ ಅಧ್ಯಕ್ಷ ರಾದ ಮಹ್ಮದ ಮಸ್ತಾನ್ ನೂರೊದಿನ್, ಮನ್ನಾ ಏ ಖೇಳಿ ಗ್ರಾಮ ಪಂಚಾಯತ ಮಾಜಿ ಅಧಕ್ಷರುಗಳಾದ ,ಸಂತೋಷ ಹಳಿಖೆಡ್, ಕುಪ್ಪಣ ಗಣಗೊಂಡ ಗ್ರಾಮ ಪಂಚಾಯತ್ ಸದಸ್ಯರಾದ ಸಂಗಪ್ಪ ಪವಾಡೆ ಶಂಕರ ಜೊತಗೊಂಡ್ ರಾಜು ವಡ್ಡಿ ಈ ಕೂಟದಲ್ಲಿ ಭಾಗವಹಿಸಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ