- Advertisement -
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯ ಪ್ರಧಾನಕಾರ್ಯದರ್ಶಿ ರಕ್ಷಿತ್ ಅವರ ಮೂವತ್ತೆಂಟನೇ ಜನ್ಮದಿನವನ್ನು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಇತ್ತೀಚೆಗೆ ಆಚರಿಸಿದರು.
ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರು ರಕ್ಷಿತ್ ಅವರಿಗೆ ಸನ್ಮಾನಿಸಿ ಮಾತನಾಡಿ, ಯುವಜನತೆ ರಾಷ್ಟ್ರದ ಆಸ್ತಿ. ರಾಷ್ಟ್ರದ ರಕ್ಷಣೆ, ಪರಿಸರ ಸಂರಕ್ಷಣೆ, ಸಾಮಾಜಿಕ ಅಭ್ಯುದಯಕ್ಕೆ ಯುವಜನತೆ ಶ್ರಮಿಸಬೇಕೆಂದು ಕರೆ ನೀಡಿದರು.
- Advertisement -
ಸಂಸ್ಥೆಯ ಪದಾಧಿಕಾರಿಗಳಾದ ಕೃಷ್ಣಯ್ಯ, ಸ್ವಾಮಿಗೌಡ, ಸೀತಾರಾಮು, ತೇಜು, ಪ್ರದೀಪ್, ರಾಜೇಶ್, ಚೆಲುವನ್, ಬಸವರಾಜು, ಕುಮಾರ, ಶಿವು, ಅನಿಲ್, ಯೋಗೇಶ್, ಜಗದೀಶ್, ದರ್ಶನ್, ಆದಿ, ಪ್ರಮೋದ್,ಕೆಂಚಿ ಸೇರಿದಂತೆ ನೂರಾರು ಕನ್ನಡಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.