ಬೀದರ – ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯಾದ್ಯಂತ ಇಂದು ಹಿಂದೂ ಮುಸ್ಲಿಮ್ ಧರ್ಮದ ಎರಡೂ ಸಮುದಾಯದ ಜನರು ಒಟ್ಟಿಗೆ ಸೇರಿ ಬಸವ ಜಯಂತಿ ಮತ್ತು ರಂಜಾನ್ ಸಂಭ್ರಮ ಆಚರಣೆ ಮಾಡಿದರು.
ಬಸವ ಜಯಂತಿ ಮತ್ತು ರಂಜಾನ್ ಹಬ್ಬ ಎರಡು ಒಂದೇ ದಿವಸ ಬಂದಿದೆಯೆಂಬುದು ಇಡೀ ದೇಶಕ್ಕೆ ಗೊತ್ತು ಇಂತಹ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಜನರು ಇಡೀ ದೇಶಕ್ಕೆ ಸೌಹಾರ್ದತೆಯ ಸಂದೇಶ ರವಾನೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪೇನು ಇಲ್ಲ.
ಮುಸ್ಲಿಂ ಸಮುದಾಯದ ಜನರು ಈದ್ಗಾ ಮೈದಾನದಲ್ಲಿ ಸೇರಿ ಪ್ರಾಥನೆ ಸಲ್ಲಿಸಿದರು .ಇದೆ ಸಂದರ್ಭದಲ್ಲಿ ಬಸವಣ್ಣನವರ ಭಕ್ತರು ಈದ್ಗಾ ಮೈದಾನದ ಮುಂದೆ ಟೆಂಟ್ ಹಾಕಿಕೊಂಡು ಮುಸ್ಲಿಂ ಸಮುದಾಯದ ಜನರಿಗೆ ಶುಭಾಶಯ ಸಲ್ಲಿಸಿದರು.
ಇನ್ನೊಂದು ಕಡೆ ಬಸವೇಶ್ವರ ವೃತ್ತ ದಲ್ಲಿ ಬಸವೇಶ್ವರ ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಜನರು ಬಸವ ಭಕ್ತರಿಗೆ ಶುಭಾಶಯ ಸಲ್ಲಿಸಿದರು.
ಒಟ್ಟಾರೆ ಹೇಳುವುದಾದರೆ ಬೀದರ್ ಜಿಲ್ಲೆಯಲ್ಲಿ ಹಿಂದು ಮುಸ್ಲಿಮ್ ಎರಡು ಸಮುದಾಯದ ಜನರು ಒಟ್ಟಿಗೆ ಸೇರಿ ಬಸವ ಜಯಂತಿ ಮತ್ತು ರಂಜಾನ್ ಹಬ್ಬ ಆಚರಣೆ ಮಾಡಿ ತ್ವೇಷಮಯದಿಂದ ಕೂಡಿರುವ ಇತರೆ ಪ್ರದೇಶಗಳ ಉಭಯ ಧರ್ಮಗಳ ನಾಯಕರಿಗೆ ಸೂಕ್ತ ಸಂದೇಶ ರವಾನಿಸಿದರು. ಹಿಂದೂ ಮುಸ್ಲಿಮ್ ಭಾವೈಕ್ಯತೆಗೆ ಬೀದರ ಜಿಲ್ಲೆ ಸಾಕ್ಷಿಯಾಗಿದ್ದು ಇಡೀ ರಾಜ್ಯವೇ ಸಂಭ್ರಮದಲ್ಲಿ ಮುಳುಗುವಂತೆ ಆಗಿದೆ. ಇದೇ ರೀತಿ ಎರಡೂ ಕೋಮಿನವರು ಸೌಹಾರ್ದದಿಂದ ಇದ್ದರೆ ಜಾತ್ಯತೀತತೆಯೋ ಅಥವಾ ತುಷ್ಟೀಕರಣದಂಥ ನೀತಿಗಳಿಂದ ಜನರಲ್ಲಿ ಭಿನ್ನತೆ ತಂದು ಮಜಾ ನೋಡುವ ರಾಜಕೀಯ ನಾಯಕರು ಮುಟ್ಟಿನೋಡಿಕೊಳ್ಳವುವಂಥ ಏಟು ನೀಡಿದ್ದಾರೆ.
ಬೀದರ ಜಿಲ್ಲೆಯ ಜನರ ಈ ಮಾದರಿ ಶೀಘ್ರದಲ್ಲಿಯೇ ಕರ್ನಾಟಕದಾದ್ಯಂತ ಪಸರಿಸಲಿ. ಜನತೆಯ ಮನಸಿನಲ್ಲಿರುವ ಧರ್ಮ ದ್ವೇಷದಂಥ ಭಾವನೆಗಳು ತೊಲಗಲಿ ಎಂಬುದಾಗಿ ಟೈಮ್ಸ್ ಆಫ್ ಕರ್ನಾಟಕ ಬಳಗ ಆಶಿಸುತ್ತದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ