ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಧರಣಿ

ಸಿಂದಗಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ ಕಾರ್ಯಲಯದ ಆವರಣದಲ್ಲಿ ಪಂಚಮಸಾಲಿ ಮುಖಂಡರು ಗುರುವಾರ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂಧರ್ಭದಲ್ಲಿ ಸಮುದಾಯದ ಮುಖಂಡರಾದ ಅಶೋಕ ಮನಗೂಳಿ, ಮುತ್ತು ಶಾಬಾದಿ, ಮುರಿಗೇಪ್ಪಗೌಡ ರದ್ದೇವಾಡಗಿ, ಸಂತೋಷ ಪಾಟೀಲ ಡಂಬಳ, ಎಚ್.ಎಮ್.ಉತ್ನಾಳ, ಆನಂದ ಶಾಬಾದಿ, ಮಲ್ಲನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ದಾನಪ್ಪ ಚನಗೊಂಡ, ಚೇತನ ರಾಂಪೂರ ಮಾತನಾಡಿ, ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಶ್ರೀ ಜಯಬಸವ ಮೃತ್ಯುಂಜಯ ಸ್ವಾಮಿಗಳು ಸುಮಾರು 800 ಕೀ.ಮೀ ಗಳಷ್ಟು ಪಾದಯಾತ್ರೆ ಮಾಡಿದ್ದಾಗ ಅಂದಿನ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದರು ಇಲ್ಲಿಯವರೆಗೆ ಮಿಸಲಾತಿ ನೀಡಿಲ್ಲ ಆ ಕಾರಣಕ್ಕೆ ಮರು ಧರಣಿ ಸತ್ಯಾಗ್ರಹ ಮಾಡುವಂತೆ ಶ್ರೀಗಳ ಆದೇಶದ ಮೇರೆಗೆ ರಾಜ್ಯದ ಜಿಲ್ಲಾ ಮತ್ತು ತಾಲೂಕಾಘಟಕದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆದು ಕೊಳ್ಳುವಲ್ಲಿ ಎಲ್ಲ ರೀತಿಯ ಅರ್ಹತೆ ಇದೆ. ಇಲ್ಲಿಯ ವರೆಗೆ ರಾಜ್ಯ ಸರ್ಕಾರ ಕೆಲವು ಭರವಸೆಯನ್ನು ಮಾತ್ರ ನೀಡುತ್ತಿದೆ ಆದರು ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪಂಚಾಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುತ್ತಾರೆ ಎಂಬ ಭರವಸೆಯಲ್ಲಿ ಈ ಸಮುದಾಯ ಕುಳಿತು ಕೊಂಡಿದೆ.

ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಲ್ಲಿ ಮಿನಾಮೇಷ ಮಾಡುತ್ತಿದೆ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಲ್ಲಿ ರಾಜ್ಯದ ಸುಮಾರು 186 ಕ್ಕೂ ಹೆಚ್ಚು ಮಠಾಧೀಶರು ಮತ್ತು 27 ಕ್ಕೂ ಶಾಸಕರು ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಈ ಸಮುದಾಯದ ಮಕ್ಕಳಿಗೆ ಮೀಸಲಾತಿ ದೊರಕದೆ ಇರುವ ಹಿನ್ನೆಲೆಯಲ್ಲಿ ಶಿಕ್ಷಣ, ಉದ್ಯೋಗ ಮತ್ತು ವಿವಿಧ ಕ್ಷೇತ್ರಗಳಲ್ಲಿ ವಂಚಿತರಾಗುತ್ತಿದ್ದಾರೆ. ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಇತ್ತ ಕಡೆ ಕ್ಯಾರೆ ಎನ್ನುತ್ತಿಲ್ಲ. ಕೂಡಲೇ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ನೀಡಬೇಕು ಇಲ್ಲವಾದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಧರಣಿ ಸತ್ಯಾಗ್ರಹದಲ್ಲಿ ಎಮ್.ಎಮ್.ಹಂಗರಗಿ, ಎಸ್.ಬಿ.ಪಾಟೀಲ ಗುಂದಗಿ, ವ್ಹಿ.ಬಿ.ಕುರುಡೆ, ಚಂದ್ರಶೇಖರ ನಾಗರಬೆಟ್ಟ, ಚಂದ್ರಶೇಖರ ಉಕ್ಕಲಿ, ಮಲ್ಲನಗೌಡ ಪಾಟೀಲ, ರಾಮು ಯಳಮೇಲಿ, ರಾಜು ಮುಜಗೊಂಡ, ಈರನಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಬಾಪು ಸಿಂದಗಿ, ಚನ್ನು ಹೊಡ್ಲ ಸೇರಿದಂತೆ ಅನೇಕರು ಇದ್ದರು.