ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ |
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||
ಎಲ್ಲರನ್ನೂ ತೃಪ್ತಗೊಳಿಸುವ, ಶ್ರೀ ಪಾರ್ವತಿದೇವಿಯ ರೂಪವಾಗಿರುವ ಶ್ರೀ ಅನ್ನಪೂರ್ಣಾದೇವಿ, ಜ್ಞಾನ, ಭಕ್ತಿ ಮತ್ತು ವೈರಾಗ್ಯ ಇವುಗಳ ಪ್ರಾಪ್ತಿಗಾಗಿ ನಮಗೆ ಭಿಕ್ಷೆಯನ್ನು (ಅನ್ನವನ್ನು) ನೀಡು. ಸತ್ಪಾತ್ರರಿಗೆ ಅನ್ನದಾನ ಮಾಡಿ ಈಶ್ವರನ ಕೃಪೆಗೆ ಪಾತ್ರರಾಗಿ.
ಅನ್ನದಾನದ ಮಹತ್ವ:
ಹಿಂದೂ ಧರ್ಮಶಾಸ್ತ್ರದಲ್ಲಿ ವರ್ಣಿಸಿರುವ ಮಹಾದಾನಗಳಲ್ಲಿ ಅನ್ನದಾನ ಮಹತ್ವದ ದಾನವಾಗಿದೆ. ‘ಅನ್ನದಾನದಂತಹ ದಾನ ಹಿಂದೆಂದೂ ಆಗಿಲ್ಲ ಮುಂದೆಂದೂ ಆಗಲಾರದು. ಹಾಗಾಗಿ ಯಾವಾಗಲೂ ಅನ್ನದಾನ ಮಾಡಬೇಕು’ ಎಂದು ಮಹಾಭಾರತದಲ್ಲಿ ಹೇಳಲಾಗಿದೆ.
ಅನ್ನದಾನದ ಲಾಭ:
ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ.
ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ. ಅನ್ನದಾನವನ್ನು ಯಾರು ಮತ್ತು ಎಷ್ಟು ಮಾಡಬೇಕು? ಧರ್ಮಶಾಸ್ತ್ರಕ್ಕನುಸಾರ ಯಾರು ಧನಾರ್ಜನೆಯನ್ನು (ಹಣ ಸಂಪಾದನೆ) ಮಾಡುತ್ತಾರೆಯೋ ಮತ್ತು ಯಾರ ಮನೆಯಲ್ಲಿ ಆಹಾರ ಬೇಯಿಸಲಾಗುತ್ತದೆಯೋ, ಅಂತಹ ಗೃಹಸ್ಥನು ‘ಅನ್ನದಾನ’ ಮಾಡುವುದು ಅವನ ಕರ್ತವ್ಯವೇ ಆಗಿರುತ್ತದೆ. ಅವನಿಗೆ ಎಷ್ಟು ಸಾಧ್ಯವಿದೆಯೋ ಅಷ್ಟು ಅನ್ನದಾನ ಮಾಡಬೇಕು.
ಪರ್ವಕಾಲದಲ್ಲಿ ಅನ್ನದಾನ ಮಾಡುವುದು ಹೆಚ್ಚು ಲಾಭದಾಯಕ ಮಕರ ಸಂಕ್ರಾಂತಿಯಿಂದ ರಥಸಪ್ತಮಿ, ಚಾತುರ್ಮಾಸ, ಉತ್ಸವ, ಹಬ್ಬ, ವ್ರತ ಮುಂತಾದ ಪರ್ವಕಾಲದಲ್ಲಿ ಅನ್ನದಾನ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಲಾಭವಾಗುತ್ತದೆ. ಅದರಲ್ಲಿಯೂ ಧಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿದರೆ ಇನ್ನೂ ಹೆಚ್ಚು ಲಾಭವಾಗುತ್ತದೆ.
ಅನ್ನದಾನವು ಧರ್ಮಕರ್ತವ್ಯವಾಗಿದೆ ಎಂದು ತಿಳಿದು ದಾನ ಮಾಡಿ:
ಅನ್ನದಾನ ಮಾಡಿದರೆ ಅನ್ನದಾನದ ದುಪ್ಪಟ್ಟು ಫಲವು ಅನ್ನದಾತನಿಗೆ ಸಿಗುತ್ತದೆ; ಆದರೆ ಅಹಂಭಾವದಿಂದ ಅನ್ನದಾನ ಮಾಡಿದರೆ ಫಲ ಅರ್ಧವಾಗುತ್ತದೆ. ಹಾಗಾಗಿ ‘ಅನ್ನದಾನ ಮಾಡುವುದು ನಮ್ಮ ಧರ್ಮಕರ್ತವ್ಯವೇ ಆಗಿದೆ’ ಎಂಬ ಭಾವದಿಂದ ಅನ್ನದಾನ ಮಾಡಬೇಕು.
ಅನ್ನದಾನಿಯು ಮಾಡಬೇಕಾದ ಪ್ರಾರ್ಥನೆ ! ‘ಹೇ ಭಗವಂತಾ, ನೀನೇ ಎಲ್ಲರ ಅನ್ನದಾತಾ ಮತ್ತು ಪೋಷಕನಾಗಿದ್ದೆ. ನಿನ್ನ ಕೃಪೆಯಿಂದಲೇ ಅನ್ನದಾನದ ಅವಕಾಶವು ನನಗೆ ಲಭಿಸಿದೆ. ಆದುದರಿಂದ ನಾನು ಕೃತಜ್ಞನಾಗಿದ್ದೇನೆ. ಈ ಅನ್ನವನ್ನು ಸೇವಿಸುವ ಜೀವಗಳಿಗೆ ರಾಷ್ಟ್ರ ಮತ್ತು ಧರ್ಮಕಾರ್ಯ ಮಾಡುವ ಪ್ರೇರಣೆ ಮತ್ತು ಶಕ್ತಿ ಸಿಗಲಿ,’ ಎಂದು ಪ್ರಾರ್ಥಿಸುತ್ತೇನೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387