ಆರೋಪ ಬಂದ ಮಾತ್ರಕ್ಕೆ ಅಪರಾಧಿಯಲ್ಲ

0
573

ಬೀದರ -ಯಾವುದೇ ಆರೋಪ ಬಂದ ತಕ್ಷಣ ಅವರು ಅಪರಾಧಿ ಆಗೋದಿಲ್ಲ. ನಮ್ಮ ಪಕ್ಷದವರ ಮೇಲೆ ಆರೋಪ ಬಂದಾಗ ನಾವು ಕ್ರಮ ಕೈಗೊಂಡಿದ್ದನ್ನು ನೀವೂ ನೋಡಿದ್ದೀರಿ. ಆರೋಪ ಬಂದ ಕೂಡಲೇ ನಮ್ಮವರು ರಾಜೀನಾಮೆ ಕೂಡ ನೀಡಿದ್ದಾರೆ ಎಂದು ಬೀದರ ಉಸ್ತವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನಗರದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ೪೦ ಪರ್ಸೆಂಟ್ ಆರೋಪದ ಬಗ್ಗೆ ಮಾತನಾಡಿದರು.

ಪರೋಕ್ಷವಾಗಿ ಕೆ ಎಸ್ ಈಶ್ವರಪ್ಪ ಅವರನ್ನು ಪ್ರಸ್ತಾಪಿಸಿದ ಅವರು, ಕಮಿಷನ್ ಆರೋಪ ಬಂದಾಗ ನಮ್ಮವರು ರಾಜೀನಾಮೆ ಕೂಡ ಕೊಟ್ಟಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು. ತನಿಖೆಯ ವರದಿ ಬಂದನಂತರ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ