ಮುನವಳ್ಳಿ: “ ಶಾಲಾ ಆರಂಭದ ದಿನಗಳು ಮಳೆಬಿಲ್ಲು ವೇಳಾಪಟ್ಟಿಯ ಪ್ರಕಾರ ಆಟ, ಹಾಸ್ಯ ಕಾರ್ಯಕ್ರಮ, ಆಟಿಕೆ ತಯಾರಿಕೆ, ನಾಟಕದ ಹಬ್ಬ, ಚಿತ್ರ, ಚಿತ್ತಾರ ಕಲಾ ಹಬ್ಬ, ಚಿತ್ರ ಜಗತ್ತು ಕಥೆ ಹೇಳುವುದು, ಕವಿತೆ ಕಟ್ಟೋಣ, ಹಾಡು ಹಾಡೋಣ, ಪರಿಸರ ಹಬ್ಬ, ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ, ಅಡುಗೆ ಮನೆಯಲ್ಲಿ ವಿಜ್ಞಾನದ ಗೊಂಚಲು, ಸಾಂಸ್ಕೃತಿಕ ಸಂಭ್ರಮ ಹೀಗೆ ವಿಭಿನ್ನ ಚಟುವಟಿಕೆಗಳ ಮೂಲಕ ಶಾಲಾ ಮಕ್ಕಳಲ್ಲಿ ಪ್ರೋತ್ಸಾಹ ತುಂಬುವ ಮೂಲಕ ಶಾಲೆಗಳು ಆಕರ್ಷಣೀಯವಾಗಿ ಮಕ್ಕಳ ಬರಮಾಡಿಕೊಂಡು ಗುಣಾತ್ಮಕ ಶಿಕ್ಷಣದತ್ತ ಪ್ರಗತಿಪರ ಹೆಜ್ಜೆಯಾಗಿರುವ ಕಲಿಕಾ ಚೇತರಿಕೆ ಕಾರ್ಯ ಜರಗುವುದು” ಎಂದು ಬಿ.ಐ.ಇ.ಆರ್,ಟಿ. ವೈ.ಬಿ.ಕಡಕೋಳ ತಿಳಿಸಿದರು.
ಅವರು ಪಟ್ಟಣದ ಗಾಂಧಿನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂತಸದ ಕ್ಷಣವನ್ನು ಮಕ್ಕಳಿಗೆ ಸಿಹಿ ಹಾಗೂ ನೋಟಬುಕ್ ಪೆನ್ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವವವನ್ನು ಆಚರಿಸಲಾಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿ ತುಕ್ಕೋಜಿ, ಮುಖ್ಯೋಪಾಧ್ಯಾಯನಿಯರಾದ ಎಚ್.ಎಸ್.ಮನಿಯಾರ, ಬಿಇಐಆರ್‌ಟಿ ವೈ.ಬಿ.ಕಡಕೋಳ, ಎಸ್.ಜಿ.ವಿಶ್ವಜ್ಞ, ವಿ.ವಿ.ಕೊಳಕಿ, ಆರ್.ಎಂ.ನಾಯ್ಕ, ಎಚ್.ಎ.ಹೊನ್ನಳ್ಳಿ, ಆರ್.ವೈ.ಶಾನಭೋಗ, ಎಂ.ಎನ್.ಉಪ್ಪಾರಗುರು, ಆರೋಗ್ಯ ಸಿಬ್ಬಂದಿಗಳಾದ ಜಿ.ಎಲ್.ಭಂಡಾರಿ, ಮೇಘಾ, ರೇಣುಕಾ ಪಟಗುಂದಿ, ಸುನಂದಾ ಸಣಕಲ್ ಸೇರಿದಂತೆ ಇತರರು ಇದ್ದರು.