ತಳಿರು ತೋರಣ ಕಟ್ಟಿ ಶಾಲೆ ಪ್ರಾರಂಭ; ಸಂಭ್ರಮದಿಂದ ಮಕ್ಕಳ ಸ್ವಾಗತ

Must Read

ಸಿಂದಗಿ: ಪಟ್ಟಣದ ಹಳೆ ಬಜಾರನಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ಸೃಷ್ಟಿಸಿ ಎಸ್‍ಡಿ ಎಂಸಿ ಅಧ್ಯಕ್ಷರಾದಿಯಾಗಿ ಸದಸ್ಯರು, ಪಾಲಕರು ಪೋಷಕರು ಮಕ್ಕಳನ್ನು ಸಿಹಿತಿನಿಸಿ ಆದರದಿಂದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಶಾಲೆ ಪ್ರಾರಂಭಿಸಲಾಯಿತು.

ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಆಹ್ವಾನಿಸಿ, ಶಿಕ್ಷಕ ವೃಂದವೇ ಗೋಡೆಗಳ ಮೇಲೆ ಬಿಡಿಸಿದ ರಂಗು-ರಂಗಿನ ಪ್ರಾಣಿ-ಪಕ್ಷಿಗಳ, ವಾಹನ, ಗಿಡ-ಮರ ಮತ್ತು ಹಣ್ಣುಗಳ ಚಿತ್ರ ಬಿಡಿಸಿದ್ದು ಮಕ್ಕಳಲ್ಲಿ ಒಳ್ಳೆಯ ಉತ್ಸಾಹ ತರುವಂತಹದಾಗಿತ್ತು. ಎಸ್.ಡಿಎಂ.ಸಿ ಅದ್ಯಕ್ಷ ಮಹಿಬೂಬ ಮರ್ತೂರ ಹಾಗೂ ಮುಖ್ಯ ಗುರು ಆರ್.ಎಂ.ಕುಮಸಗಿ ಅವರು ಮಕ್ಕಳಿಗೆ ಸಿಹಿ ಹಂಚಿ ಸ್ವಾಗತಿಸಿದರು. ಇನ್ನಿತರ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

ಎಸ್.ಡಿಎಂ.ಸಿ ಅದ್ಯಕ್ಷ ಮಹಿಬೂಬ ಮರ್ತೂರ ಮಾತನಾಡಿ, ಸತತ 2 ವರ್ಷಗಳಿಂದ ಮಾಹಾಮಾರಿ ಕೊವಿಡ್ ಆವರಿಸಿ ಮಕ್ಕಳ ಶಿಕ್ಷಣದ ಮೇಲೆ ಬಹುತರ ಪರಿಣಾಮ ಬೀರಿತ್ತು ಅಲ್ಲದೆ ನಾಲ್ಕನೇ ಅಲೆ ಸೃಷ್ಟಿಯಾಗುತ್ತದೆ ಎಂದು ಭಯಭೀತಿಯಲ್ಲಿರುವಾಗ ಶಿಕ್ಷಣ ಸಚಿವ ಬಿ.ಸಿ ನಾಗೇಶ ಅವರು ಮಕ್ಕಳ ಶಿಕ್ಷಣ ಕುಂಠಿತವಾಗಬಾರದೆಂದು ಯಾವುದೇ ಕಾಲಕ್ಕೂ ಬೇಸಿಗೆ ರಜೆ ಮುಂದುವರೆಸದೇ 16 ರಿಂದಲೇ ರಾಜ್ಯದ ಎಲ್ಲ ಶಾಲೆಗಳು ಪ್ರಾರಂಭವಾಗಬೇಕು ಎನ್ನುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದರು.

ಈ ಸಂದರ್ಭದಲ್ಲಿ ಝಡ್.ಎಸ್.ಮನಿಯಾರ, ಡಿ.ಐ.ಮುಲ್ಲಾ, ಕೆ.ಡಿ.ಮುಲ್ಲಾ, ಎನ್.ಎಚ್.ಸಿಂದಗಿ, ಶ್ರೀಮತಿ ಎಸ್.ಎನ್.ಇಂಡಿಕರ, ಎಫ್.ಎಂ.ಬಾಗವಾನ ಸೇರಿದಂತೆ ಅಡುಗೆ ಸಿಬ್ಬಂದಿ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group