ವಿಶ್ವ ಸೋದರ ದಿನದ ಕವನ

Must Read

ಮಧುರ ಸೋದರ ಬಂಧವು

ರಕ್ತದಿಂದಲೆ ಬಂಧವಾದರೆ
ಸ್ನೇಹಕೆಲ್ಲಿದೆ ಅರ್ಥವು
ಸಿಕ್ತವಾಗಲು ಸೋದರತೆಯೇ
ಮುಖ್ಯವಾದರೆ ತೀರ್ಥವು

ಭಕ್ತಿಯಿಂದಲಿ ಕಾಯ್ದುಕೊಂಡರೆ
ಸೋದರತೆಯಾ ನಿತ್ಯವು
ಮುಕ್ತವಾಗಿಸಿ ತ್ವೇಷವನ್ನೇ
ಉಕ್ತ ಬಂಧುರ ಸತ್ಯವು

ಹುಟ್ಟಿನಿಂದಲೆ ಮೆಟ್ಟಿ ನಿಲ್ಲುವ
ಎರೆದು ಪ್ರೀತಿಯ ಬಂಧವ
ಗಟ್ಟಿಯಾಗಿಸಿ ನೆಟ್ಟ ಮನದೊಳ್
ಅಣ್ಣ ತಮ್ಮರ ಬಂಧುರ

ತ್ಯಾಗವಿದ್ದರೆ ಸೋದರತೆಗೇ
ಅರ್ಥ ಬಪ್ಪುದು ತಪ್ಪದೆ
ಭೋಗವಿದ್ದರೆ ಅರ್ಥಹೀನವು
ಅಳಸಿ ಹೂರಣ ತೀಡದೆ

ಜನ್ಮ ಜನ್ಮದ ಪುಣ್ಯವಾಗಿದೆ
ಅಣ್ಣ ತಮ್ಮರ ಜೀವನ
ಹಮ್ಮಿನಿಂದಲೆ ಮೆಚ್ಚಿ ನೆಚ್ಚಿದೆ
ಅಕ್ಕ ತಂಗಿಯ ಭಾವನ

ಸೋದರೆಲ್ಲರು ಕೂಡಿ ಬಾಳಲು
ನವ್ಯವಾಗಿಪ ತಾಣವು
ತೀಡಿ ತಿದ್ದಿದ ನತ್ತಿನಂದದಿ
ಮಧುರ ಸೋದರ ಬಂಧವು


ಮಾಲತೇಶ ನಾ ಚಳಗೇರಿ
ಬ್ಯಾಡಗಿ

Latest News

ಹಣಕ್ಕಿಂತ ಸಂಸ್ಕಾರ ಮುಖ್ಯ : ಮಲ್ಲಿಕಾರ್ಜುನ ಅವಟಿ

ಸಿಂದಗಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ, ಇದು ಕೇವಲ ಬೀಳ್ಕೊಡುಗೆ ಸಮಾರಂಭವಲ್ಲ; ನಿಮ್ಮ ಬದುಕಿನ ಹೊಸ ಅಧ್ಯಾಯದ ಆರಂಭ. ಶಿಕ್ಷಣ ಹಣ ಸಂಪಾದನೆಗಾಗಿ ಅಲ್ಲ, ಜ್ಞಾನಾರ್ಜನೆ ಮತ್ತು...

More Articles Like This

error: Content is protected !!
Join WhatsApp Group