ಬೆಂಗಳೂರು– ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಹಾಗೂ ಸಂಜನಾ ಎಂಬ ‘ ಕಲಾವಿದರಿಗೆ ‘ ಕೋರ್ಟ್ ಮೂರು ದಿನಗಳ ಕಸ್ಟಡಿಗೆ ಆದೇಶ ನೀಡಿದೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಸಂಜನಾಗೆ ಕೋರ್ಟ್ ತಪರಾಕಿ ನೀಡಿದ್ದು ಮೂರು ದಿನಗಳ ಸಿಸಿಬಿ ಕಸ್ಟಡಿಗೆ ಆದೇಶ ನೀಡಲಾಗಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟೀಮಣಿಯರು ದಿನಕ್ಕೊಂದು ಡ್ರಾಮಾ ಆಡಲು ತೊಡಗಿದ್ದಾರೆ.
ಮೊದಲು ತನಗೆ ಮದುವೆಯೇ ಆಗಿಲ್ಲ ಎಂದು ಅಲವತ್ತುಕೊಂಡಿದ್ದ ನಟೀಮಣಿ ಸಂಜನಾ ಇನ್ನೊಬ್ಬ ಆರೋಪಿ ಡಾ. ಅಜೀಜ್ ಜೊತೆ ಮದುವೆಯ ಫೋಟೋದಲ್ಲಿ ಕಾಣಿಸಿಕೊಂಡ ಫೋಟೋ ವೈರಲ್ ಆಗುತ್ತಿದ್ದಂತೆಯೇ ಬಾಯಿ ಮುಚ್ಚಿಕೊಂಡಿದ್ದಾಳೆ.
ಇತ್ತ ರಾಗಿಣಿಯನ್ನು ಪರಿಚಯಿಸಿದ ಶಿವಪ್ರಕಾಶ್ ಹಾಗೂ ರವಿಶಂಕರ ಎಂಬುವವರ ನಡುವೆ ಕಿರಿಕ್ ಆರಂಭವಾಗಿದೆ.
ಹೀಗೆ ದಿನಕ್ಕೊಂದು ಡ್ರಾಮಾ ಹಚ್ಚಿಕೊಂಡಿರುವ ಡ್ರಗ್ಸ್ ರಾಣಿಯರು ಸಿಸಿಬಿ ಪೊಲೀಸರನ್ನೇ ಬೆಚ್ಚಿ ಬೀಳಿಸುತ್ತಿದ್ದು ತನಿಖೆ ಮಾತ್ರ ಮತ್ತೆ ಮತ್ತೆ ಚುರುಕಾಗುವಂತೆ ಮಾಡುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.