spot_img
spot_img

Dr. H Narasimhaiah Information in Kannada- ಡಾ. ಎಚ್. ನರಸಿಂಹಯ್ಯ

Must Read

spot_img
- Advertisement -

ಜೂನ್ 6, ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡ ನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ. ಎಚ್. ನರಸಿಂಹಯ್ಯನವರ ಜನ್ಮದಿನ.

ತಮ್ಮ ವಿದ್ಯಾರ್ಥಿಗಳ ಪ್ರೀತಿಯ ‘ಎಚ್. ಎನ್’ ಪವಾಡಗಳನ್ನು ನಂಬಿರಲಿಲ್ಲ. ಆದರೆ ಅವರ ಬದುಕೇ ಒಂದು ಪವಾಡ. ಅವರ ಬದುಕು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿರುವ ಸಾರ್ಥಕ ಶಿಲ್ಪಿ. ಕರ್ನಾಟಕದ ಪ್ರಮುಖ ಶಿಕ್ಷಣವೇತ್ತರೂ, ಗಾಂಧೀವಾದಿಗಳೂ, ಮಾನವೀಯ ಸಮಾಜಸುಧಾರಕರೂ ಆಗಿ ಎಚ್. ಎನ್ ಮಾಡಿರುವ ಕೆಲಸ ಅಪಾರವಾದದ್ದು. ಅವರದು ನುಡಿದಂತೆ ನಡೆದ, ನಡೆದಂತೆ ನುಡಿದ ಜೀವನ.

ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೇ ಎಲ್ಲ ಕಲಿಕೆ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನ ಪ್ರಜ್ಞೆಯುಳ್ಳ ವ್ಯಕ್ತಿಯ ಸೂಕ್ಷ್ಮ ಸಂವೇದಿ ಮನಸ್ಸು, ಬದುಕಿನ ಪ್ರತಿಯೊಂದು ಘಟನೆಯಿಂದಲೂ ಕಲಿಯಬಹುದು.

- Advertisement -

ಜನರ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕರ್ಮ ಸಿದ್ಧಾಂತ ವಿಧಿವಾದದಲ್ಲಿ ಪರಿಣಮಿಸಿದೆ. ಇದನ್ನು ಜನತೆಯ ಮನಸ್ಸಿನಿಂದ ಕಿತ್ತೊಗೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಮನುಷ್ಯನೇ ತನ್ನ ವಿಧಿಯ ಯಜಮಾನ ಮತ್ತು ಭವಿಷ್ಯದ ರೂವಾರಿ ಎಂಬ ಅಂಶವನ್ನು ಜನತೆಗೆ ತಿಳಿಯ ಹೇಳಬೇಕು. ಬೇರು ಬಿಟ್ಟಿರುವ ವಿಧಿವಾದೀ ಧಾರ್ಮಿಕ ಅಭಿಪ್ರಾಯಗಳು, ಅವೈಚಾರಿಕ ಅಂಧಶ್ರದ್ಧೆಯ ಆಚರಣೆಗಳು ಮತ್ತು ಪೂರ್ತಿ ಅವೈಜ್ಞಾನಿಕವಾಗಿರುವ ಜ್ಯೋತಿಷ್ಯದಲ್ಲಿನ ನಂಬಿಕೆ – ಇವೆಲ್ಲದರ ಹಿಡಿತ ನಮ್ಮ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿನ ಆಮೂಲಾಗ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಅಡ್ಡ ಬಂದಿದೆ.

ನರಸಿಂಹಯ್ಯನವರ ಬಗ್ಗೆ ಇನ್ನೇನೂ ಉಳಿದಿಲ್ಲ ಎನ್ನುವಷ್ಟರ ಮಟ್ಟಿಗೆ ಅನೇಕರು ಬರೆದಿದ್ದಾರೆ.

ಆದರೆ ಆ ವ್ಯಕ್ತಿ ಒಂದು ವಿಶ್ವಕೋಶ , ಅಕ್ಷಯ ಪಾತ್ರೆ, ಬರೆದಷ್ಟು ಮೊಗೆದಷ್ಟು ವಿಷಯಗಳು ಸಿಕ್ಕುತ್ತಲೇ ಇರುತ್ತವೆ.

- Advertisement -

ಗೌರಿಬಿದನೂರಿನ ಹೊಸೂರು ಇಲ್ಲಿರುವ ಒಂದೂವರೆ ಚದರದ ಮನೆಯ ವಳಕಲ್ಲ ಪಕ್ಕದಲ್ಲಿ ಹುಟ್ಟಿದ್ದು.

ಎಂಟನೇ ತರಗತಿಗೆ ಶಾಲೆಗೆ ಸೇರಲು ಅಲ್ಲಿಂದಲೇ ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಬಂದದ್ದು ಅವರ ಜ್ಞಾನದಾಹ ಹಾಗೂ ಬದುಕು ಗೆಲ್ಲಬೇಕೆನ್ನುವ ಛಲವನ್ನು ಸೂಚಿಸುತ್ತದೆ.

9ನೇ ತರಗತಿಯಲ್ಲಿದ್ದಾಗ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದು , ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ್ದು ಅವರ ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ.

ಕಾಲೇಜು ಓದುವಾಗ ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿದರೂ, BSc ಕೊನೆ ವರ್ಷದಲ್ಲಿ ಎಲ್ಲ ವಿಷಯಗಳ ಪರೀಕ್ಷೆಯನ್ನು ಒಟ್ಟಿಗೆ ಬರೆದು ಪಾಸುಮಾಡಿದ್ದು ಮತ್ತೊಮ್ಮೆ ಬದುಕು ಗೆಲ್ಲಲೇ ಬೇಕೆಂಬ ಛಲದಿಂದ ಸಾಬೀತು ಮಾಡಿದರು . ಈ ಹಂತದಲ್ಲಿ ರಾಮಕೃಷ್ಣ ವಿದ್ಯಾರ್ಥಿ ಮಂದಿರದಲ್ಲಿ ಆಸರೆ ಪಡೆದಿದ್ದ ಅವರು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದರು. ಮದುವೆಯ ಬಗ್ಗೆ ನಿರ್ಲಿಪ್ತರಾಗಿದ್ದರು.

MSc ಪಾಸು ಮಾಡಿ ಕೆಲಸಕ್ಕೆ ಸೇರಿದ್ದು ಜೀವನಕ್ಕೆ ಸ್ವಲ್ಪ ಆಸರೆಯಾಯಿತಾದರೂ , ಮತ್ತೊಮ್ಮೆ ಚಳವಳಿಗೆ ಧುಮುಕಿದರು.

ನಂತರದ ಹಂತದಲ್ಲಿ ಮತ್ತೊಮ್ಮೆ ನ್ಯಾಷನಲ್ ಕಾಲೇಜಿಗೆ ಕೆಲಸಕ್ಕೆ ಸೇರಿದ ಅವರು ಕಾಲೇಜನ್ನು ಅತೀ ಕಡಿಮೆ ಫಲಿತಾಂಶದಿಂದ ರ್ಯಾಂಕ್ (rank) ಪಡೆಯುವ ಕಾಲೇಜಾಗಿ ಪರಿವರ್ತಿಸಿದ್ದು ಅವರ ಶೈಕ್ಷಣಿಕ ಶಕ್ತಿ , ಆಡಳಿತಾತ್ಮಕ ಶಕ್ತಿ , ಮುತ್ತ್ಸದ್ದಿತನ , ಮತ್ತು ದೂರದರ್ಶಿತ್ವವನ್ನು ಬಿಂಬಿಸುತ್ತದೆ.

ತನ್ನ 36ನೇ ವಯಸ್ಸಿನಲ್ಲಿ ಅಮೆರಿಕಾಗೆ ತೆರಳಿ ಓಹಿಯೋ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯಾರ್ ಫಿಸಿಕ್ಸ್ ವಿಷಯದಮೇಲೆ ಸಂಶೋಧನೆ ಮಾಡಿ PhD ಪಡೆದದ್ದು ಅವರ ಎರಡನೇ ಹಂತದ ಸಾಧನೆಗೆ ನಾಂದಿ ಹಾಡಿತು.

ಅವರು ಅಮೆರಿಕೆಗೆ ತೆರಳುವಾಗ ಏರ್ಪೋರ್ಟ್ ನಲ್ಲಿ ಶಿಷ್ಯರಾದಿಯಾಗಿ ಜನಸಮೂಹ ಬೀಳ್ಕೊಟ್ಟದ್ದು , ಅಷ್ಟು ಹೊತ್ತಿಗೆ ಅವರು ಸಂಪಾದಿಸಿದ್ದ “ಆಸ್ತಿ”ಯನ್ನು ಸೂಚಿಸುತ್ತದೆ.

ಅಮೇರಿಕೆಯಿಂದ ವಾಪಾಸಾಗುವ ಹೊತ್ತಿಗೆ ಅವರ ಮನೋಭಾವದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು.

ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶಾವಕಾಶ ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಸ್ಥಾಪನೆ.

ನಂತರದ ದಿನಗಳಲ್ಲಿ ಕಾಲೇಜು ಅಧ್ಯಾಪಕರೊಬ್ಬರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆಯ್ಕೆಯಾಗಿದ್ದು ಇತಿಹಾಸ . ವಿ. ವಿ. ಯನ್ನು ನಗರದ ಮಧ್ಯಭಾಗದಿಂದ ಹೊರವಲಯಕ್ಕೆ ಸ್ಥಳಾಂತರಗೊಳಿಸಿ ಅದನ್ನು ಕ್ರಿಯಾಶೀಲವನ್ನಾಗಿಸಿದ್ದು ಇಂದಿಗೂ ನೆನಪಿಸಿಕೊಳ್ಳಬಹುದಾದ ಸಾಧನೆ.

ಸಾಯಿಬಾಬಾ ವಿರುದ್ದ ತಿರುಗಿಬಿದ್ದದ್ದು , ಒಂದು ಕುಂಬಳ ಕಾಯಿ ಕೊಡೆಂದು ಕೇಳಿದ್ದು ಮೂಢನಂಬಿಕೆ ಮತ್ತು ಸಮಾಜದ ಬಗೆಗಿನ ಹೋರಾಟದ ಒಂದು ಅಧ್ಯಾಯವಷ್ಟೇ.

ಹಳ್ಳಿಗಳಲ್ಲಿ ಕಾಲೇಜು ಸ್ಥಾಪಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದಿಕ್ಕಿನಲ್ಲಿ ಒತ್ತು ಕೊಟ್ಟದ್ದು, ಅವರ ಸಮಾಜ ಮುಖಿ ಚಿಂತನೆಗಳು.

ಇದಿಷ್ಟೇ ಅಲ್ಲದೆ ಸಮಾಜದ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು. ರಾಜಕಾರಣಿಗಳೊಂದಿಗೆ ಸೂಜಿಗೆ ಮುತ್ತು ಕೊಟ್ಟಂತೆ ಸಂಬಂಧ ಇಟ್ಟುಕೊಂಡಿದ್ದು ಅವರ ಮುತ್ಸದ್ದಿತನ ವನ್ನು ಸೂಚಿಸುತ್ತದೆ.

ಅವರ ಆಡಳಿತ ಶೈಲಿಯಂತೂ , ವಿಶಿಷ್ಟವಾದದ್ದು , IIM ನಲ್ಲಿ Dr. H N Style of Administration ಎಂದು ಒಂದು ಪಾಠ ಸೇರಿಸಬಹುದು. ಸಣ್ಣ ಸಂಸ್ಥೆಗಳ ಆಡಳಿತಕ್ಕೆ ಮಾರ್ಗಸೂಚಿಯಾಗಬಲ್ಲುದು.

ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅನಭಿಷಿಕ್ತ ದೊರೆಯಾಗಿ ಆಳಿದ್ದು, ಅಲ್ಲೇ ಕಾಲೇಜಿನ ಮೂಲೆಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಜೀವಿಸಿದ್ದು ಅವರ ಜೀವನದ ದರ್ಶನವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಸೂಚಿಸುತ್ತದೆ.

ಇನ್ನು ಪ್ರಶಸ್ತಿ, ಗೌರವಗಳು ಈ ಲೇಖನದ ಮಿತಿಗೆ ಹೊರತಾಗಿವೆ ಬಿಡಿ .

ಅವರಿಗೆ ಬಂದ ಶಾಲುಗಳನ್ನು ತಮ್ಮ ಸುತ್ತ ಮುತ್ತಲಿನವರಿಗೆ ಕೊಟ್ಟು ಮಿಕ್ಕಿದ್ದನ್ನು , ಒಂದು ದಿನ ರಾತ್ರಿ ಪರಿಚಯಸ್ಥರ ಕೈಗೆ ಕೊಟ್ಟು ಫುಟ್ಪಾತ್ ನಲ್ಲಿ ಮಲಗಿರುವ ನಿರ್ಗತಿಕರಿಗೆ ಹೊದಿಸಿ ಬರಲು ಹೇಳಿದ್ದರು!!

ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್ ಅವರ ನಿಕಟವರ್ತಿಗಳ ಅಭಿಪ್ರಾಯ. ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಬರೆಯುತ್ತಾ ಹೋದರೆ ಲೇಖನ ಮುಗಿಯುವುದಿಲ್ಲ .


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group