70 ವರ್ಷಗಳಿಂದ ಈ ವ್ಯಕ್ತಿ ಆಸ್ಪತ್ರೆ ಯನ್ನೇ ನೋಡಿಲ್ಲ ! ಆರೋಗ್ಯಕ್ಕೆ ಈತನ ಎರಡೇ ಸೂತ್ರಗಳು ಇವೇ ನೋಡಿ.

Must Read

ಬರ್ನಾರ್ಡ್ ಲಾವೆಸ್ ಎಂಬ ಹೆಸರಿನ ಈ ವ್ಯಕ್ತಿ ಸನ್ 1958 ರಿಂದ ಅನಾರೋಗ್ಯವೆಂದು ಒಂದೇ ಒಂದು ದಿನ ರಜೆ ಹಾಕಿಲ್ಲ ! ಅಂದರೆ ಕಳೆದ ಎಪ್ಪತ್ತು ವರ್ಷಗಳಿಂದ ಈತ ಆಸ್ಪತ್ರೆಗೆ ಹೋಗಿಯೇ ಇಲ್ಲ. 18 ವರ್ಷದವನಿದ್ದಾಗ ಫಿಟ್ನೆಸ್ ಟೆಸ್ಟ್ ಗೆ ಅಂತ ಹೋಗಿದ್ದೇ ಕೊನೆ. ಆಮೇಲೆ ಬರ್ನಾರ್ಡ್ ದವಾಖಾನೆಯ ಕಡೆಗೆ ಮುಖ ಹಾಕಿಲ್ಲ.

ತನ್ನ ಈ ಆರೋಗ್ಯಕ್ಕೆ ಆತ ಕೊಡುವ ಕಾರಣ ಗೊತ್ತೇ ? ಎರಡೇ ಎರಡು….ಪ್ರತಿ ದಿನ ಒಂದು ಬಿಸಿ ಊಟ ಹಾಗೂ ಸುಮಾರು 40 ಮೆಟ್ಟಿಲುಗಳನ್ನು ಏರುವುದು !

ಅದನ್ನು ಬಿಟ್ಟರೆ ಬರ್ನಾರ್ಡ್ ಗೆ ಸಿಗರೇಟು, ಸಾರಾಯಿ ಯಂಥ ಯಾವುದೇ ವ್ಯಸನಗಳಿಲ್ಲ. ವಾರದಲ್ಲಿ ಮೂರು ಸಲ ಚರ್ಚ್ ನ ದೊಡ್ಡ ಗಡಿಯಾರದ ಕೀ ಕೊಡಲು 110 ಮೆಟ್ಟಿಲುಗಳನ್ನು ಏರಿ ಇಳಿಯುವುದೇ ಆತನ ಆರೋಗ್ಯದ ಗುಟ್ಟು ಎನ್ನುತ್ತಾನೆ ಬರ್ನಾರ್ಡ್. ಇದು ಸುಮಾರು 40 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈವರೆಗೂ ಆತ ಏರಿದ ಮೆಟ್ಟಿಲುಗಳು 750000 !

ನಿವೃತ್ತನಾಗುವ ಮೊದಲು ಕೂಡ ಆತ ಪ್ರತಿದಿನ ನಾಲ್ಕು ಮೈಲುಗಳ ವಾಕಿಂಗ್ ಮಾಡುತ್ತಿದ್ದ ಬರ್ನಾರ್ಡ್ ಬೇರೆ ಯಾವುದೇ ವ್ಯಾಯಾಮಗಳಿಗಿಂತಲೂ ಕೇವಲ ವಾಕಿಂಗ್ ಒಂದೇ ಮನುಷ್ಯನನ್ನು ಆರೋಗ್ಯವಂತನನ್ನಾಗಿ ಇಡುತ್ತದೆ ಎನ್ನುತ್ತಾನೆ.

ಈವರೆಗೂ ಸ್ವಂತ ಕಾರು ಹೊಂದಿಲ್ಲದ ಬರ್ನಾರ್ಡ್ ನಿಯಮಿತ ವಾಕಿಂಗ್ ಹಾಗೂ ಒಂದೇ ಬಿಸಿ ಊಟದಿಂದಾಗಿ ಕಳೆದ ಎಪ್ಪತ್ತು ವರ್ಷಗಳಿಂದ ಆಸ್ಪತ್ರೆಗೆ ಹೋಗಿಲ್ಲವೆಂಬುದೆ ಎಲ್ಲರಿಗೂ ಸ್ಪೂರ್ತಿಯ ವಿಚಾರವಾಗಿದೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group